ಸಮಾಜ-ಭಗವಂತನ ಸೇವೆಯಿಂದ ಮನುಷ್ಯನ ಬದುಕಿಗೆ ಸಾರ್ಥಕತೆ: ಪೇಜಾವರ ಶ್ರೀ
ಉಡುಪಿ: ಸಮಾಜದಿಂದ ಪಡೆದ ಸಂಪತ್ತಿನ ಸ್ವಲ್ಪ ಭಾಗವನ್ನು ನಾವು ಭಗವಂತ ಹಾಗೂ ಸಮಾಜಕ್ಕೆ ವಿನಿಯೋಗಿಸಬೇಕು. ಆಗ ಮನುಷ್ಯನ ಬದುಕಿಗೆ ಸಾರ್ಥಕತೆ ತುಂಬುತ್ತದೆ. ದೇವರ ಅನುಗ್ರಹ ಮತ್ತು ಸಮಾಜದ ಸಹಕಾರವಿಲ್ಲದೆ, ಯಾವ ವ್ಯಕ್ತಿಯೂ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಏರಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಭಾನುವಾರ ನಡೆದ ಉದ್ಯಮಿ ಭುವನೇಂದ್ರ ಕಿದಿಯೂರು ಅವರ ೭೫ರ ಸಂಭ್ರಮ ಮತ್ತು ರತ್ನೋತ್ಸವ- ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರನ್ನು ನಿತ್ಯ ಪೂಜಿಸುವವರಿಗೆ ಯಾವುದೇ […]