ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸಿಗಬೇಕು: ಡಾ.ಪದ್ಮಿನಿ ಪ್ರಸಾದ್

ಮಂಗಳೂರು: ಶಿಕ್ಷಣ ಮತ್ತು ಆರೋಗ್ಯ ಇದ್ದರೆ ಉಳಿದ್ದೆಲ್ಲವೂ ತಾನಾಗಿಯೇ ಬರುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸಿಗಬೇಕು. ಕಾಯಿಲೆಗೆ ಪ್ರಾರಂಭದ ಹಂತದಲ್ಲೇ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಟ್ಟರೆ ಮುಂಬರುವ ದೊಡ್ಡಮಟ್ಟದ ತೊಂದರೆಗಳನ್ನು ತಪ್ಪಿಸಬಹುದು ಎಂದು ಭರವಸೆ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷೆ ಹಾಗೂ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಹೇಳಿದರು. ಭಾನುವಾರದಂದು ಗುರುಬೆಳದಿಂಗಳು ಫೌಂಡೇಶನ್‌ ಕುದ್ರೋಳಿ ಆಶ್ರಯದಲ್ಲಿ ಭರವಸೆ ಚಾರಿಟೆಬಲ್ ಫೌಂಡೇಶನ್ ಬೆಂಗಳೂರು ವತಿಯಿಂದ ಶ್ರೀ ಗೋಕರ್ಣನಾಥ ಕಾಲೇಜು ಸಭಾಂಗಣದಲ್ಲಿ ಉಚಿತ ಬೃಹತ್ ಆರೋಗ್ಯ ಮೇಳದ […]