26 ಪಕ್ಷಗಳ ಮೈತ್ರಿಕೂಟದ ಹೆಸರು INDIA ಎಂದು ಘೋಷಣೆ: ಈ ಬಾರಿಯ ಲೋಕಸಭೆ ಚುನಾವಣೆ NDA v/s INDIA ನಡುವೆ

ಬೆಂಗಳೂರು: ಮಂಗಳವಾರ ರಾಜ್ಯ ರಾಜಧಾನಿಯಲ್ಲಿ ನಡೆದ ಪ್ರತಿಪಕ್ಷಗಳ ನಾಲ್ಕು ಗಂಟೆಗಳ ಸುದೀರ್ಘ ಸಭೆಯ ಕೊನೆಯಲ್ಲಿ, 26 ಪಕ್ಷಗಳು ತಮ್ಮ ಮೈತ್ರಿಕೂಟದ ಹೆಸರನ್ನು INDIA ಎಂದು ಘೋಷಿಸಿಕೊಂಡವು. INDIA- Indian National Developmental, Inclusive Alliance (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ, ಅಂತರ್ಗತ ಮೈತ್ರಿ). ಪ್ರತಿಪಕ್ಷಗಳು 2024 ರ ಚುನಾವಣಾ ಸ್ಪರ್ಧೆಯನ್ನು ಬಿಜೆಪಿ ಮತ್ತು ದೇಶದ ಉಳಿದ ಭಾಗಗಳ ನಡುವಿನ ಹೋರಾಟ ಎಂದು ರೂಪಿಸಿದ್ದು, ಮಂಗಳವಾರ ಬೆಳಗ್ಗೆ ಮುಖಂಡರು ಸಭೆಗೆ ಕುಳಿತುಕೊಳ್ಳುವ ಮುನ್ನವೇ ಹೆಸರನ್ನು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ. […]