ಇಂದಿನಿಂದ ಪ್ರಾಯೋಗಿಕ ಪರೀಕ್ಷೆಗಳು ಶುರು; ಹಾಜರಾಗದವರಿಗೆ ಮರುಪರೀಕ್ಷೆಯೂ ಇಲ್ಲ, ಅಂಕವೂ ಇಲ್ಲ

ಬೆಂಗಳೂರು: ಹಿಜಬ್ ಧರಿಸುವ ಕುರಿತು ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ಹಿಜಬ್ ಗಾಗಿ ಪಟ್ಟು ಹಿಡಿದು ಕುಳಿತುಬಿಟ್ಟರೆ ಅಂತಹ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶವನ್ನು ಕಳೆದುಕೊಳ್ಳಲಿರುವುದು ನಿಶ್ಚಿತ. ಫೆ. 21, ಸೋಮವಾರದಿಂದಲೇ ಪ್ರಾಯೋಗಿಕ ಪರೀಕ್ಷೆಗಳು ಶುರುವಾಗಲಿದ್ದು, ಹಿಜಬ್ ಗಾಗಿ ಪಟ್ಟು ಹಿಡಿದಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಒಂದು ವೇಳೆ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗದಿದ್ದಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ. […]

ರೋಚಕ‌ ಘಟ್ಟದಲ್ಲಿ ಅಣುಕು ಸಾಮಾನ್ಯ: ಅಶ್ವಿನ್

ಬೆಂಗಳೂರು: ಬುಧವಾರ ನಡೆದ‌ ನನ್ನ ಮತ್ತು ವಿರಾಟ್ ಕೊಹ್ಲಿ ಆವರ ನಡವಳಿಕೆಯು ಆ ಸಂದರ್ಭದ ಒತ್ತಡದಲ್ಲಿ ನಡೆದಿದೆಯಷ್ಟೇ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಹೇಳಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 202 ರನ್‌ಗಳ ಗುರಿ ನೀಡಿತ್ತು. ಬೆನ್ನಟ್ಟಿದ ಪಂಜಾಬ್ ಗೆ ಕೊನೆಯ ಓವರ್‌ನಲ್ಲಿ 27 ರನ್‌ಗಳ ಅಗತ್ಯವಿತ್ತು. ಆ ಓವರ್ ಬೌಲಿಂಗ್ ಮಾಡಿದ  ಉಮೇಶ್ ಯಾದವ್ ಎಸೆತವನ್ನು ಅಶ್ವಿನ್ ಲಾಂಗ್‌ ಆನ್‌ ಬೌಂಡರಿ ಗೆರೆ ದಾಟಿಸುವ ಪ್ರಯತ್ನ ಮಾಡಿದರು. ಆದರೆ […]