ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯಲಿದೆ ಆರ್ಮಿ ಡೇ ಪರೇಡ್

ಬೆಂಗಳೂರು: ರಾಷ್ಟ್ರ ರಾಜಧಾನಿಯ ಹೊರಗೆ ಪ್ರಮುಖ ಕಾರ್ಯಕ್ರಮಗಳನ್ನು ನಡೆಸುವ ಉಪಕ್ರಮಗಳ ಭಾಗವಾಗಿ ಮುಂದಿನ ವರ್ಷ ಆರ್ಮಿ ಡೇ ಪರೇಡ್ ಅನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು. 1949 ರಲ್ಲಿ ಈ ದಿನದಂದು ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಮೊದಲ ಭಾರತೀಯ ಅಧಿಕಾರಿ ಅಧಿಕಾರ ವಹಿಸಿಕೊಂಡ ನೆನಪಿಗಾಗಿ ಪ್ರತಿ ವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಮುಂದಿನ ಆರ್ಮಿ ಡೇ ಪರೇಡ್ ಬೆಂಗಳೂರಿನಲ್ಲಿ ಜನವರಿ 15, 2023 ರಂದು ನಡೆಯಲಿದೆ. ಸೇನಾ ದಿನದ ಪರೇಡ್ ಅನ್ನು ರಾಷ್ಟ್ರ ರಾಜಧಾನಿಯಿಂದ […]

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಸ್ಕೃತದಲ್ಲಿ ಕ್ರಿಕೆಟ್ ಕಾಮೆಂಟರಿ!! ನೆಟ್ಟಿಗರಿಂದ ಮೆಚ್ಚುಗೆ

ಬೆಂಗಳೂರು: ಬೆಂಗಳೂರು ನಗರದ ಬಡಾವಣೆಯೊಂದರಲ್ಲಿ ಸಂಪೂರ್ಣವಾಗಿ ಸಂಸ್ಕೃತದಲ್ಲಿ ಮಾತನಾಡುವ ಮತ್ತು ಕ್ರಿಕೆಟ್ ಕಾಮೆಂಟರಿಯನ್ನೂ ಸಂಪೂರ್ಣವಾಗಿ ಸಂಸ್ಕೃತದಲ್ಲಿ ನಡೆಸುವ ವೀಡಿಯೋ ಒಂದನ್ನು ಸಂಸ್ಕೃತ ಭಾರತಿ ಸಂಸ್ಥೆಯ ಪೂರ್ಣ ಕಾಲಿಕ ಕಾರ್ಯಕರ್ತ ಲಕ್ಷ್ಮೀ ನಾರಾಯಣ್ ಬಿ.ಎಸ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Sanskrit and cricket pic.twitter.com/5fWmk9ZMZy — LAKSHMI NARAYANA B.S (BHUVANAKOTE) (@chidsamskritam) October 2, 2022

ಬೆಂದಕಾಳೂರೆಂಬ ಹಳ್ಳಿಯನ್ನು ನಗರವನ್ನಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ: ಪ್ರಸನ್ನ ಹೆಚ್

ಉಡುಪಿ: ಮಣ್ಣಿನ ಕೋಟೆಯಿಂದ ಕಟ್ಟಿದ ಹಳ್ಳಿ ಪ್ರದೇಶವಾಗಿದ್ದ ಬೆಂದಕಾಳೂರನ್ನು ನಗರವಾಗಿ ನಿರ್ಮಿಸಿದ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರಿಂದ, ಬೆಂಗಳೂರು ನಗರ ಇಂದು ದೇಶ-ವಿದೇಶಿಗರಿಗೆ ಚಿರಪರಿಚಿತವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕೆಂಪೇಗೌಡರು ಶೌರ್ಯ, ಸಾಹಸ, […]

ಮಹಿಳೆಯರ ಮನಮೆಚ್ಚಿನ ರೇಷ್ಮೆ ಸೀರೆ ಮತ್ತು ಬೆಳ್ಳಿಯ ಆಭರಣಗಳ ಮಳಿಗೆ ಚೆನ್ನೈ ಶ್ರೀ ಕುಮರನ್ ಸ್ಟೋರ್ಸ್

ಚೆನ್ನೈ ಅಂದ ತಕ್ಷಣ ಮನಸ್ಸಿಗೆ ಬರುವುದು ಕಂಚೀಪುರಂನ ರೇಷ್ಮೆ ಸೀರೆಗಳು. ಮಾರುಕಟ್ಟೆಯಲ್ಲಿ ರೇಷ್ಮೆ ಸೀರೆಗಳನ್ನು ಮಾರುವ ಅಂಗಡಿಗಳು ನೂರಾರಿವೆ. ಆದರೆ, ಅಪ್ಪಟ ರೇಷ್ಮೆ ಹೆಸರಿನಲ್ಲಿ ಜರಿ ಸೀರೆಯನ್ನು ಗ್ರಾಹಕರಿಗೆ ಮಾರಿ, ದುಡ್ಡು ಮಾಡುವ ಹಲವಾರು ಸಂಸ್ಥೆಗಳಿವೆ. ಇದಕ್ಕೆ ಅಪವಾದವೆಂಬಂತೆ ಅಪ್ಪಟ ರೇಷ್ಮೆ ಸೀರೆ ಮತ್ತು ಶುದ್ದ ಬೆಳ್ಳಿಯ ಆಭರಣಗಳನ್ನು ಗ್ರಾಹಕರ ಮನೆ ಮನೆಗೆ ತಲುಪಿಸುತ್ತಿದೆ ಚೆನ್ನೈ ಶ್ರೀ ಕುಮರನ್ ಸ್ಟೋರ್ಸ್ ರೇಷ್ಮೆ ಸೀರೆ ಮತ್ತು ಬೆಳ್ಳಿ ಆಭರಣ ಮಳಿಗೆ. ಚೆನ್ನೈ ಕುಮರನ್ ಸಿಲ್ಕ್ಸ್: ಕಂಚೀಪುರಂ ಸಿಲ್ಕ್, ಬನಾರಸ್ […]

ಸದ್ಯಕ್ಕಿಲ್ಲ ಮುಖ್ಯಮಂತ್ರಿ ಬದಲಾವಣೆ: ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ?

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಕಾರ್ಯತಂತ್ರದ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೆಂಗಳೂರು ಭೇಟಿ ಸದ್ಯಕ್ಕಂತೂ ಯಾವುದೇ ಫಲಿತಾಂಶವನ್ನು ನೀಡಿದಂತೆ ಕಾಣುತ್ತಿಲ್ಲ. ರಾಜ್ಯ ಬಿಜೆಪಿ ಕೋರ್ ಕಮಿಟಿ ಮತ್ತು ಪಕ್ಷದ ನಾಯಕರೊಂದಿಗೆ ನಿಗದಿಪಡಿಸಲಾಗಿದ್ದ ಸಭೆ ರದ್ದುಗೊಂಡಿರುವುದು ಬೊಮ್ಮಾಯಿ ಅವರೆ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎನ್ನುವ ಸೂಚನೆ ಎಂದು ಬಲ್ಲ ಮೂಲಗಳು ತಿಳಿಸುತ್ತಿವೆ. ಅಮಿತ್ ಶಾ ಅವರ ಬೆಂಗಳೂರು ಭೇಟಿ ಮುಖ್ಯಮಂತ್ರಿ ಬದಲಾವಣೆ ಅಥವಾ ಸಂಪುಟ […]