ಬೆಳ್ತಂಗಡಿಯ‌ ವಿಜ್ಞಾನಿ ಅಮೇರಿಕಾದಲ್ಲಿ ಪರ್ವತಾರೋಹಣದ ವೇಳೆ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ವಿಜ್ಞಾನಿ ಅಮೇರಿಕಾದಲ್ಲಿ ಪರ್ವತಾರೋಹಣ ವೇಳೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಪಂಡಿಜೆ ಮೂಲದ ಪ್ರಸ್ತುತ ಅಮೆರಿಕಾದಲ್ಲಿ ವಾಸ್ತವ್ಯವಿದ್ದ ಚೈತನ್ಯ ಸಾಠೆ ಮೃತ ದುರ್ದೈವಿ. ಇವರು ಆಗಸ್ಟ್ 24ರಂದು ಅಮೆರಿಕಾದ ಮೌಂಟ್ ಹುಡ್ ಲೋವರ್ ಜಾರ್ಜ್‍ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್ ಸ್ಟೇಟ್ ಪಾರ್ಕ್ ಎಂಬಲ್ಲಿ 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇವರು ಪೋರ್ಟ್‍ಲ್ಯಾಂಡ್ ಮೂಲದ ಮಾಝಾಮಾಸ್ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದರು. ‌ಜತೆಗೆ ಅನೇಕ […]