ಬೆಳ್ತಂಗಡಿ: ಶಿರ್ಲಾಲಿನಲ್ಲಿ ಮಹಿಳೆಗೆ ಕೊರೊನಾ ಪತ್ತೆ: ಗ್ರಾಮ ಸೀಲ್ ಡೌನ್ ಗೆ ಸಿದ್ದತೆ
ಮಂಗಳೂರು: ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮಹಿಳೆಗೆ ಕೊರೊನ ಪಾಸಿಟಿವ್ ಆತಂಕ ಸೃಷ್ಟಿಸಿದೆ. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 34 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಶಿರ್ಲಾಲು ಗ್ರಾಮ ಸಿಲ್ ಡೌನ್ ಗೆ ಸಿದ್ದತೆ ನಡೆಸಲಾಗಿದೆ. ಮಹಿಳೆಯನ್ನು ಇಂದು ಬೆಳಗ್ಗೆ ಕೋವಿಡ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ. ಉಸಿರಾಟದ ತೊಂದರೆ ಇದ್ದಿದ್ರಿಂದ ಗ್ರಾಮಸ್ಥರೆ ಒತ್ತಾಯ ಮಾಡಿ ಪರೀಕ್ಷೆ ಮಾಡಿಸಲು ತಿಳಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]