ಮನೆ ಮೇಲೆ ತೆಂಗಿನ ಮರ ಉರುಳಿ ಹಾನಿ; ಮನೆ ಮಂದಿ ಅಪಾಯದಿಂದ ಪಾರು
ಬೆಳ್ತಂಗಡಿ: ಪಡಂಗಡಿ ಗ್ರಾಮದ ಬದ್ಯಾರು ಸಮೀಪದ ಕಳೆಂಜಿರೋಡಿ ಜೊಬೆಲ್ಲಾ ಫೆಲಿಕ್ಸ್ ಅವರ ಮನೆಗೆ ಶುಕ್ರವಾರ ರಾತ್ರಿ ತೆಂಗಿನ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಗೀಡಾಗಿದೆ.ಫೆಲಿಕ್ಸ್ ಅವರ ಪುತ್ರ ನವೀನ ಹಾಗೂ ಆತನ ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿ ವಾಸವಾಗಿದ್ದರು. ಆದರೆ ಪೂಜೆ ನಿಮಿತ್ತ ಅವರೆಲ್ಲರೂ ಚರ್ಚ್‌ಗೆ ತೆರಳಿದ್ದರಿಂದ ಜೀವಹಾನಿ ತಪ್ಪಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಸಿಬಂದಿ ಭೇಟಿ ನೀಡಿದ್ಧಾರೆ.
ಬೆಳ್ತಂಗಡಿ: ಜಲಪ್ರಳಯಕ್ಕೆ ಕೊಚ್ಚಿಹೋದ ಭೂಮಿಯಲ್ಲೀಗ ಸಮೃದ್ಧ ಕೃಷಿ
ಮಂಗಳೂರು: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಪರ್ವತಶ್ರೇಣಿಗಳ ತಪ್ಪಲಿನಲ್ಲಿ ಅಂದು ಜಲಪ್ರಳಯಕ್ಕೆ ಕೊಚ್ಚಿಹೋಗಿದ್ದ ಹತ್ತಾರು ಗ್ರಾಮಗಳು ಮತ್ತೆ ಸುಂದರವಾಗಿ ಎದ್ದು ನಿಂತಿವೆ. ದಾನಿಗಳ ಸಹಾಯದಿಂದ ಜನರು ಮತ್ತೆ ಬದುಕು ಕಟ್ಟಿಕೊಟ್ಟಿದ್ದಾರೆ. ಮೃತ್ಯುಂಜಯ ಹೊಳೆಯಿಂದ ಕೃಷಿ ಭೂಮಿಗೆ ಬಿದ್ದ 4 ಅಡಿ ಮರಗಳನ್ನು ಹೊರ ತೆಗೆದು ಸುಮಾರು 70 ಎಕರೆ ಭೂ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಇವರು ಸ್ವಾತಂತ್ರ್ಯೋತ್ಸವದಂದು ಸುಮಾರು 500ಕ್ಕೂ ಹೆಚ್ಚು ಯುವಕರ ತಂಡ ಕಟ್ಟಿಕೊಂಡು ಅ.15ರಂದು ಪುನರ್‌ನಿರ್ಮಾಣಕ್ಕೆ […]