ನೆರೆ ಬಂದರೂ ಹಾನಿಯಾಗದೇ ಉಳಿದ ದೈವಗುಡಿ: ಬೆಳ್ತಂಗಡಿಯ ದಿಡುಪೆಯಲ್ಲಿ ಪವಾಡ.!

ಮಂಗಳೂರು: ಕಳೆದ ಕೆಲ ದಿನಗಳ ಹಿಂದೆ ಪಶ್ಚಿಮ ಘಟ್ಟದಲ್ಲಿ ಸಂಭವಿಸಿದ ಮೇಘ ಸ್ಫೋಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳು ತತ್ತರಿಸಿ ಹೋಗಿವೆ. ನೆರೆಯ ಅಬ್ಬರಕ್ಕೆ ಊರಿಗೆ ಊರೇ ಮುಳುಗಿದ್ದು, 250ಕ್ಕೂ ಅಧಿಕ‌ ಮನೆಗಳು ನೆಲಕ್ಕೆ ಉರುಳಿವೆ. ಬದುಕಿಗೆ ಮೂಲಾಧರವಾದ ಕೃಷಿ ನೆಲಕಚ್ಚಿದ್ದು ಬದುಕು ಅಕ್ಷರಶ: ಬೀದಿ ಪಾಲಾಗಿವೆ. ಸಾಕಷ್ಟು ಕುಟುಂಬಗಳು ಮನೆಯೂ ಇಲ್ಲದೇ ಹಾಗೂ ಇದ್ದರೂ ವಾಸಿಸಲಾಗದ ಸ್ಥಿತಿ ಬಂದೊಗಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ದಿಡುಪೆ ಮುಂತಾದ ಗ್ರಾಮದ […]