ಬೆಳ್ತಂಗಡಿ: ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಗ್ರಾಮಲೋಕ
ಬೆಳ್ತಂಗಡಿ: ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಮತ್ತು ಮಂಗ್ಳುರ್ಚಿ ಮೊತಿಯಾಂ ಸಾಂಸ್ಕೃತಿಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಪ್ರಧಾನ ರಸ್ತೆಯ ಲೋಬೊ ಮೋಟಾರ್ಸ್ ಆವರಣದಲ್ಲಿ ಗ್ರಾಮಲೋಕ ಕಾರ್ಯಕ್ರಮ ಜೂ.30 ಭಾನುವಾರ ಸಂಜೆ 4.30 ಕ್ಕೆ ನಡೆಯಿತು. ಬೆಳ್ತಂಗಡಿ ಧರ್ಮಕ್ಷೇತ್ರದ ಪ್ರಧಾನ ಧರ್ಮಗುರು ಫಾ| ವಾಲ್ಟರ್ ಡಿಮೆಲ್ಲೊ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಸಂದೇಶದಲ್ಲಿ ಫಾ| ಡಿ’ಮೆಲ್ಲೊ “ಕೊಂಕಣಿ ಭಾಷೆ ವೈವಿಧ್ಯತೆಗಳಿಂದ ಕೂಡಿದ ಎಲ್ಲರನ್ನೂ ಒಳಗೊಳ್ಳುವ ಪ್ರೀತಿಯ ಭಾಷೆ. ವೈಶಿಷ್ಠ್ಯಪೂರ್ಣ ಜಾನಪದ ಮತ್ತು ಗುಣಮಟ್ಟದ ಸಾಹಿತ್ಯ ಪರಂಪರೆ […]