ಬೆಳ್ತಂಗಡಿ: ಉಪ ತಹಶೀಲ್ದಾರ್ ಸುನಿಲ್ ಹೃದಯಾಘಾತದಿಂದ ನಿಧನ.
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸಿ, ಉಪ ತಹಶೀಲ್ದಾರ್ ಆಗಿ ಪದೋನ್ನತಿ ಹೊಂದಿದ್ದ ಸುನಿಲ್ (42ವ) ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಸುನಿಲ್ ಅವರು ಬೆಳ್ತಂಗಡಿ ಆಡಳಿತ ಕಂದಾಯ ಇಲಾಖೆಯಲ್ಲಿ ಗ್ರಾಮ ಕರಣಿಕರಾಗಿ ಬಳಿಕ ಆಡಳಿತ ಸೌಧದಲ್ಲಿ ಭೂಮಿ ಶಾಖೆಯ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದು, ಬಳಿಕ ಪದೋನ್ನತ್ತಿ ಹೊಂದಿ ಉಪ ತಹಸಿಲ್ದಾರ್ ಆಗಿ ಮಡಿಕೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.