ಎಲ್ಲಾ ಮುಗೀತು ಅಂದುಕೊಳ್ಳಲೇಬೇಡಿ, ಕನಸು ಇನ್ನೇನು ಶುರುವಾಗುತ್ತೆ !
♠ ಆರ್.ಜೆ.ಅಚ್ಲಾಡಿ ನಾವು ಜೀವನದಲ್ಲಿ ಎರಡು ವಿಚಾರಕ್ಕಾಗಿ ಹೋರಾಟ ನಡೆಸುತ್ತಲೇ ಇರುತ್ತೇವೆ. ಒಂದು ಬದುಕಿಗಾಗಿ, ಮತ್ತೊಂದು ಬದುಕುವುದಕ್ಕಾಗಿ. ಸಣ್ಣಗೆ ಹುಷಾರ್ ತಪ್ಪಿ ಜೀವಕ್ಕೇನಾದರು ಆದರೂ ವೈದ್ಯರ ಬಳಿ ದೌಡಾಯಿಸಿ ಸಮಸ್ಯೆ ವಾಸಿಯಾಗುವ ತನಕ ಪ್ರಪಂಚವೇ ತಲೆಕೆಳಗಾದಂತೆ ಚಡಪಡಿಸುತ್ತೇವೆ, ಇದು ನಾವು ಬದುಕುವುದಕ್ಕಾಗಿ ನಡೆಸುವ ಹೋರಾಟ. ಸಣ್ಣ ಸಂಬಳದ ನೌಕರಿಯಿಂದ ಹಿಡಿದು, ಕೋಟಿ-ಕೋಟಿ ಸಂಪಾದಿಸುತ್ತಾ ಇನ್ನಷ್ಟು-ಮತ್ತಷ್ಟು ಸಂಪಾದಿಸಬೇಕು ಎಂದು ಜೀವನಪೂರ್ತಿ ಹೋರಾಟದಲ್ಲಿರುತ್ತಾನೆ. ಇದು ಬದುಕಿಗಾಗಿ ನಡೆಸುವ ಹೋರಾಟ. ಬದುಕು ಮತ್ತು ಬದುಕುವುದು ಎನ್ನುವ ಎರಡು ವಿಚಾರಗಳು ಸಂಪೂರ್ಣವಾಗಿ ಮಾನವ […]