ಮೂರು ದಿನಗಳ ಬೀಚ್ ಉತ್ಸವಕ್ಕೆ ಸಂಭ್ರಮದ ತೆರೆ
ಮಲ್ಪೆ: ಭಾನುವಾರ ಮಲ್ಪೆ ಕಡಲತೀರದಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಬೀಚ್ ಉತ್ಸವದಲ್ಲಿ ಉಡುಪಿ ಮತ್ತು ಸುತ್ತಮುತ್ತಲಿನ ಸ್ಥಳೀಯರು ಮತ್ತು ಪ್ರಯಾಣಿಕರು ಭರ್ಜರಿಯಾಗಿಯೆ ಪಾಲ್ಗೊಂಡರು. ಉತ್ಸವ ಪ್ರಯುಕ್ತ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ತಳಿಗಳು ನೋಡುಗರನ್ನು ಆಕರ್ಷಿಸಿದವು. ಡ್ಯಾಷ್‌ಹಂಡ್‌ನಿಂದ ಹಿಡಿದು ಬಾರ್ನ್ಯಾರ್ಡ್, ಗೋಲ್ಡನ್ ರಿಟ್ರೈವರ್, ಡಾಲ್ಮೇಷಿಯನ್, ಡೋಬರ್‌ಮ್ಯಾನ್, ಲ್ಯಾಬ್ರಡಾರ್, ಗ್ರೇಟ್ ಡೇನ್, ಜರ್ಮನ್ ಶೆಫರ್ಡ್ ಮತ್ತು ಇತರ ವಿವಿಧ ತಳಿಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು. ಉತ್ಸವದಲ್ಲಿ ಗಾಳಿಪಟ ಹಾರಿಸುವುದು ಮತ್ತೊಂದು ಪ್ರಮುಖ ಆಕರ್ಷಣೆಯಾಗಿತ್ತು. ತುಳುನಾಡಿನ ಸಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ವಿವಿಧ […]
ಉಡುಪಿ ರಜತಮಹೋತ್ಸವ: ಕಾಪು- ಮಲ್ಪೆ ಬೀಚ್ ನಲ್ಲಿ ಸಮಾರಂಭ
ಉಡುಪಿ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮವು ಜನವರಿ 20 ರಿಂದ 22 ರ ವರೆಗೆ ಮಲ್ಪೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಉದ್ಘಾಟಿಸಲಿದ್ದು, ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ತಾಲೂಕು ಆಡಳಿತ ಇವರ ವತಿಯಿಂದ ಉಡುಪಿ […]