ಕಾರ್ಕಳ-ಬಂಟ್ವಾಳದಲ್ಲಿ ಉ.ಪ್ರ. ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್‌ ರೋಡ್‌ ಶೋ : ಹರಿದು ಬಂದ ಜನಸಾಗರ

ಕಾರ್ಕಳ : ಕರಾವಳಿಯ ಜಿಲ್ಲೆಗಳಾದ ಕಾರ್ಕಳ ಮತ್ತು ಬಂಟ್ವಾಳದಲ್ಲಿ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ನಡೆಸಿದರು. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿ, ರೋಡ್ ಶೋದಲ್ಲಿ ಪಾಲ್ಗೊಂಡರು. ಬಜರಂಗದಳದ ಸುದ್ದಿಗೇನಾದರೂ ಕಾಂಗ್ರೆಸ್ ಕೈ ಹಾಕಿದಲ್ಲಿ ಸಹಿಸುವ ಮಾತೇ ಇಲ್ಲ. ಬಜರಂಗದಳ ನಿಶೇಧ ಕುರಿತು ಕಾಂಗ್ರೆಸ್ ಯೋಚಿಸಿದ್ದು, ಅಂಥದ್ದೇನಾದರೂ ನಡೆಯದಂತೆ ಬಿಜೆಪಿಯನ್ನೇ ಜನರು ಆಯ್ಕೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. भगवान श्री हनुमान […]

ಬಂಟ್ವಾಳ: ಜನಾರ್ಧನ ಪೂಜಾರಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ

ಬಂಟ್ವಾಳ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬುಧವಾರ ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಸಚಿವ ಜನಾರ್ಧನ ಪೂಜಾರಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.ಹಿರಿಯ ನಾಯಕನ ಆರೋಗ್ಯ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು. ಇಂದು ಬಂಟ್ವಾಳ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಹೊರಟು, ಮಧ್ಯಾಹ್ನ 12:35ಕ್ಕೆ ಮಿನಿವಿಧಾನಸೌಧದಲ್ಲಿ ರಮಾನಾಥ ರೈ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ […]