ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಅಪಘಾತ, ಮಹಿಳೆ ಸಾವು

ಕುಂದಾಪುರ:  ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಲಾರಿ ಹಾಗೂ ಸ್ಕೂಟರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮಹಿಳೆಯೊರ್ವರು ತೀವೃವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತರನ್ನು ಮಹಿಳೆಯನ್ನು ಕೋಡಿ ನಿವಾಸಿ ಮೈಮೂನ(50) ಎಂದು ಗುರುತಿಸಲಾಗಿದೆ. ಗುರುವಾರ ತಮ್ಮ ತವರು ಮನೆಯಾದ ಗುಲ್ವಾಡಿಯ ದರ್ಗಾಕ್ಕೆ ಪೂಜೆಗೆ ತೆರಳಿದ್ದ ಅವರು ಪತಿಯೊಂದಿಗೆ ಬಸ್ರೂರು ಮಾರ್ಗವಾಗಿ ಕೋಡಿಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗೋಳಿ ಬಳಿಯಲ್ಲಿ ಶಿವಮೊಗ್ಗ ಕಡೆಯಿಂದ ಸರಕು ತುಂಬಿಕೊಂಡು ಬರುತ್ತಿದ್ದ 10 ಚಕ್ರದ ಲಾರಿ ಸ್ಕೂಟರ್‌ಗೆ ಡಿಕ್ಕಿ […]