ರಾಷ್ಟ್ರಮಟ್ಟದ ಭರತನಾಟ್ಯ ರಿಯಾಲಿಟಿ ಶೋನಲ್ಲಿ ಉಡುಪಿಯ ಜಾನಕಿ ಗೆ ‘ನಾಟ್ಯರತ್ನ’ ಪ್ರಶಸ್ತಿ

ಉಡುಪಿ: ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರ ಸಂಸ್ಥೆಯ ವಿದ್ಯಾರ್ಥಿನಿ ಡಿ.ಎ.ಜಾನಕಿ ಖಾಸಗಿ ವಾಹಿನಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ‘ನಾಟ್ಯ ರತ್ನ ಭರತ ನಾಟ್ಯ’ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನಾಟ್ಯರತ್ನ’ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಮಂಜರಿ ಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 560 ಮಕ್ಕಳ ಪೈಕಿ ಅತ್ಯುತ್ತಮ ಪ್ರದರ್ಶನ ನೀಡಿದ ಜಾನಕಿ ಫೈನಲ್‌ನಲ್ಲಿ ಪ್ರಶಸ್ತಿ ಗೆದ್ದು ಕೊಂಡರು. ಲಿಟಲ್‌ ರಾಕ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಜಾನಕಿ 6ನೇ ತರಗತಿಯಲ್ಲಿ ಓದುತ್ತಿದ್ದು, ‘ಹೆಜ್ಜೆ ಗೆಜ್ಜೆ’ ಪ್ರತಿಷ್ಠಾನ ಆಯೋಜಿಸಿದ್ದ […]