ಬಂಟ್ವಾಳ:ನಾನಾ ತರಬೇತಿಗಳ ಉದ್ಘಾಟನೆ
ಬಂಟ್ವಾಳ :ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಾನಾ ತರಬೇತಿಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಚಂದ್ರವತಿ ಸೇಸಪ್ಪ ಕೋಟ್ಯಾನ್ ತರಬೇತಿ ಉದ್ಘಾಟಿಸಿದರು. ಮೀರಾ ರಮೇಶ್ ಮಾತನಾಡಿ, ಇಂತಹ ತರಬೇತಿಗಳು ದೈಹಿಹ ಸದೃಢತೆ ನೀಡುತ್ತದೆ ಎಂದರು. ಶಿಕ್ಷಕಿ, ನೃತ್ಯಪಟು ಪೂರ್ಣಿಮಾ ಅವರು ತರಬೇತಿಯ ಕುರಿತು ವಿವಿಧ ಮಾಹಿತಿ ನೀಡಿದರು. ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಜಯಲಕ್ಷಿ , ಭುವನೇಶ್ ಸ್ವಾಗತಿಸಿದರು, ಕಾರ್ಯದರ್ಶಿ ಚಂದ್ರಾವತಿ ಕುಶಲರಾಜ್ ವಂದಿಸಿದರು. ಸಂಘಟಕರಾದ ಜಯಶ್ರೀ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.