ಬಂಟ್ವಾಳದಲ್ಲಿ ಸಿಕ್ತು ಬಿಳಿ ಬಣ್ಣದ ಅಪರೂಪದ ಹೆಬ್ಬಾವು: ಸುರಕ್ಷಿತವಾಗಿ ಹಿಡಿದು ಪಿಲಿಕುಳಕ್ಕೆ ಬಿಟ್ರು ಸ್ನೇಕ್ ಕಿರಣ್

ಮಂಗಳೂರು: ಬಿಳಿ ಬಣ್ಣದ ಅಪರೂಪದ” ಆಲ್ಟಿನೊ” ಹೆಬ್ಬಾವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾವಳಕಟ್ಟೆ ಎಂಬಲ್ಲಿ ಕಾಣಿಸಿಕೊಂಡಿದ್ದು, ಸುರಕ್ಷಿತವಾಗಿ ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ಬಿಡಲಾಗಿದೆ. ಬಂಟ್ವಾಳದ ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಬಿಳಿ ಹೆಬ್ಬಾವು ಕಾಣಸಿಕೊಂಡಿದ್ದು, ನಂತರ ಉರಗತಜ್ಞ ಸ್ನೇಕ್ ಕಿರಣ್ ಅವರಿಗೆ ಹಾವಿನ ಬಗ್ಗೆ ತಿಳಿಸಿದಾಗ ಅವರು ಕೂಡಲೇ ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಯ ಗಮನಕ್ಕೆ ತಂದು, ಅವರ ಅದೇಶದಂತೆ ಪಿಲಿಕುಳಕ್ಕೆ ನಿಸರ್ಗ ದಾಮಕ್ಕೆ ನೀಡಿದ್ದಾರೆ . ಇಂತಹ ಬಿಳಿ […]

ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೋನಾದಿಂದ ಮೃತಪಟ್ಟ ವೃದ್ಧೆಯ ಅಂತ್ಯ ಸಂಸ್ಕಾರ

ಮಂಗಳೂರು:ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೊನಾ ಪಾಸಿಟಿವ್ ರೋಗಿಯ ಅಂತ್ಯ ಸಂಸ್ಕಾರ ನಡೆದಿದೆ. ಅಂತ್ಯ ಸಂಸ್ಕಾರಕ್ಕೆ ಆರಂಭದಲ್ಲಿ ಜನ ಅವಕಾಶ ಮಾಡಿಕೊಟ್ಟಿರಲಿಲ್ಲ. ಮಂಗಳೂರಿನ ಎಲ್ಲಾ ಸ್ಮಶಾನದಲ್ಲೂ ರಾತ್ರಿ ಇಡೀ ಜನರ ಕಾವಲು ಇತ್ತು. ಕೊನೆಗೆ ಪೊಲೀಸ್ ರಕ್ಷಣೆಯೊಂದಿಗೆ ಬಂಟ್ವಾಳದ ಕೈಕುಂಜೆಯಲ್ಲಿ ಅಂತ್ಯಸಂಸ್ಕಾರ ನಡೆದಿದೆ. ಜಿಲ್ಲಾಡಳಿತ ದ ಕಾರ್ಯಕ್ಕೆ ಅಡ್ಡಿಯಾದ ಶಾಸಕ ಭರತ್ ಶೆಟ್ಟಿ ಪಚ್ಚನಾಡಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಕ್ಕೆ  ಶಾಸಕ ವೈ ಭರತ್ ಶೆಟ್ಟಿ, ಅವಕಾಶ ಮಾಡಿಕೊಡಲಿಲ್ಲ. ಇದೀಗ  ಶಾಸಕರ ಮೌಡ್ಯಕ್ಕೆ […]