Home Trending ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೋನಾದಿಂದ ಮೃತಪಟ್ಟ ವೃದ್ಧೆಯ ಅಂತ್ಯ...

ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೋನಾದಿಂದ ಮೃತಪಟ್ಟ ವೃದ್ಧೆಯ ಅಂತ್ಯ ಸಂಸ್ಕಾರ

ಮಂಗಳೂರು:ಬಂಟ್ವಾಳದ ದ ಕೈಕುಂಜೆ ರುದ್ರ ಭೂಮಿಯಲ್ಲಿ ಜನರ ವಿರೋಧದ ನಡುವೆ ಕೊರೊನಾ ಪಾಸಿಟಿವ್ ರೋಗಿಯ ಅಂತ್ಯ ಸಂಸ್ಕಾರ ನಡೆದಿದೆ.

ಅಂತ್ಯ ಸಂಸ್ಕಾರಕ್ಕೆ ಆರಂಭದಲ್ಲಿ ಜನ ಅವಕಾಶ ಮಾಡಿಕೊಟ್ಟಿರಲಿಲ್ಲ. ಮಂಗಳೂರಿನ ಎಲ್ಲಾ ಸ್ಮಶಾನದಲ್ಲೂ ರಾತ್ರಿ ಇಡೀ ಜನರ ಕಾವಲು ಇತ್ತು.

ಕೊನೆಗೆ ಪೊಲೀಸ್ ರಕ್ಷಣೆಯೊಂದಿಗೆ ಬಂಟ್ವಾಳದ ಕೈಕುಂಜೆಯಲ್ಲಿ ಅಂತ್ಯಸಂಸ್ಕಾರ ನಡೆದಿದೆ.

ಜಿಲ್ಲಾಡಳಿತ ದ ಕಾರ್ಯಕ್ಕೆ ಅಡ್ಡಿಯಾದ ಶಾಸಕ ಭರತ್ ಶೆಟ್ಟಿ

ಪಚ್ಚನಾಡಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಕ್ಕೆ  ಶಾಸಕ ವೈ ಭರತ್ ಶೆಟ್ಟಿ, ಅವಕಾಶ ಮಾಡಿಕೊಡಲಿಲ್ಲ. ಇದೀಗ  ಶಾಸಕರ ಮೌಡ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ  ಜನಾಕ್ರೋಶ ವ್ಯಕ್ತವಾಗಿದೆ.