ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಂಗಳೂರು ವಲಯ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಟ್ರೋಫಿ

ಬಂಟಕಲ್: ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 28 ಎಪ್ರಿಲ್ 2025 ರಂದು ನಡೆದ ಮಹಿಳೆಯರ ವಿಶ್ವೇಶ್ವರಯ್ಯತಾಂತ್ರಿಕ ವಿದ್ಯಾಲಯದ ಮಂಗಳೂರು ವಿಭಾಗದ ಅಂತರಕಾಲೇಜು ವಾಲಿಬಾಲ್ ಪಂದ್ಯಾವಳಿ 2025-26” ರಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಟ್ರೋಪಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿಯರಾದ ಗಣಕಯಂತ್ರ ವಿಭಾಗದ ಮೊದಲನೇ ವರ್ಷದ ಅನನ್ಯ ಬಿ, ಪ್ರಕೃತಿ, ದೀಕ್ಷಾ ಎನ್ ನಾಯಕ್ಮತ್ತು ಲಕ್ಷ್ಮಿ, ಎರಡನೇ ವರ್ಷದ ಶ್ರೀ ನಿಧಿ ಹೆಗ್ಡೆ,ಮೂರನೇ ವರ್ಷದ ಶ್ರೇಯಾ […]