ಬಂಟಕಲ್: ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿನಾಂಕ 28 ಎಪ್ರಿಲ್ 2025 ರಂದು ನಡೆದ ಮಹಿಳೆಯರ ವಿಶ್ವೇಶ್ವರಯ್ಯ
ತಾಂತ್ರಿಕ ವಿದ್ಯಾಲಯದ ಮಂಗಳೂರು ವಿಭಾಗದ ಅಂತರ
ಕಾಲೇಜು ವಾಲಿಬಾಲ್ ಪಂದ್ಯಾವಳಿ 2025-26” ರಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್ ಅಪ್ ಟ್ರೋಪಿಯನ್ನು ಪಡೆದಿರುತ್ತಾರೆ.
ವಿದ್ಯಾರ್ಥಿನಿಯರಾದ ಗಣಕಯಂತ್ರ ವಿಭಾಗದ ಮೊದಲನೇ ವರ್ಷದ ಅನನ್ಯ ಬಿ, ಪ್ರಕೃತಿ, ದೀಕ್ಷಾ ಎನ್ ನಾಯಕ್
ಮತ್ತು ಲಕ್ಷ್ಮಿ, ಎರಡನೇ ವರ್ಷದ ಶ್ರೀ ನಿಧಿ ಹೆಗ್ಡೆ,
ಮೂರನೇ ವರ್ಷದ ಶ್ರೇಯಾ ಮತ್ತು ಆರ್ಟಿಫೀಶಿಯಲ್
ಇಂಟೆಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದ ಮೂರನೇ
ವರ್ಷದ ದೀಕ್ಷಾ ಪ್ರಭು, ವೈಷ್ಣವಿ ಆರ್ ನಾಯಕ್ ಮತ್ತು
ಎರಡನೇ ವರ್ಷದ ಅನನ್ಯಾ ಭಟ್ ಇವರುಗಳು 2 ಮೇ 2025
ರಂದು ಹುಬ್ಬಳ್ಳಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ
ನಡೆಯುವ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ
ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ
ಮಂಡಳಿ, ಪ್ರಾಂಶುಪಾಲರುಹಾಗೂ ಸಿಬ್ಬಂದಿ ವರ್ಗ ಹರ್ಷ
ವ್ಯಕ್ತಪಡಿಸಿರುತ್ತಾರೆ.












