ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಹಾಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವ
ಉಡುಪಿ: ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಾಗೂ ವಾರ್ಷಿಕ ರಥೋತ್ಸವವು ಜರುಗಲಿದ್ದು ಭಾನುವಾರದಂದು ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ದೇವಳದ ಶ್ರೀನಿವಾಸ ತಂತ್ರಿ ಗಳ ನೇತೃತ್ವದಲ್ಲಿ ಶತ ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಉತ್ಸವ ಬಲಿ, ರಥೋತ್ಸವ, ವಸಂತಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಉದ್ಘಾಟನೆಯನ್ನು ನಾಡೋಜ ಡಾ. ಜಿ. ಶಂಕರ್ ನೆರವೇರಿಸಿದರು. ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ, ವಾಸ್ತು ತಜ್ಞ ಸುಬ್ರಮಣ್ಯ ಭಟ್ , ಆನಂದ ಪಿ ಸುವರ್ಣ , ಪ್ರಭಾಕರ್ ಪೂಜಾರಿ […]