ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಚಿನ್ನ, ಒಂದು ಬೆಳ್ಳಿ ಪದಕ ವಿಜೇತ ಅಶ್ವಿನ್ ಸನಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಉಡುಪಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಭಾಗವಹಿಸಿದ ಅಶ್ವಿನ್ ಸನಿಲ್ ಇವರು ಪವರ್ ಲಿಫ್ಟಿಂಗ್ ಮತ್ತು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬೆಂಗಳೂರು- ಉಡುಪಿಯ ಜಂಗಲ್ ಡ್ರೈವ್‌ನ ಸುಂದರ ಚಿತ್ರ ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ: ಕುಕ್ಕೆ ಸುಬ್ರಮಣ್ಯ- ಗುಂಡ್ಯ ರಸ್ತೆಗೆ ಉದ್ಯಮ ದಿಗ್ಗಜ ಪುಲ್ ಫಿದಾ!
ಉಡುಪಿ: ಮಹೀಂದ್ರಾ ಕಂಪನಿಯ ಅಧ್ಯಕ್ಷ ಬೆಂಗಳೂರು-ಉಡುಪಿಯ ಹಚ್ಚ ಹಸುರಿನ ರಸ್ತೆ ಕಂಡು ಫುಲ್ ಫಿದಾ ಆಗಿದ್ದಾರೆ. ಉದ್ಯಮ ದಿಗ್ಗಜ ಸಾಮಾನ್ಯವಾಗಿ ಹಾಸ್ಯ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬುಧವಾರ, ಈ ಬಿಲಿಯನೇರ್ ಸುಂದರವಾದ ಜಂಗಲ್ ಡ್ರೈವ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಮತ್ತು ಉಡುಪಿ ನಡುವೆ ಬರುವ ರಸ್ತೆಯ ಒಂದು ಸುಂದರವಾದ ಚಿತ್ರವನ್ನು ಹಂಚಿಕೊಂಡು ನೆಟ್ಟಿಗರನ್ನು ಸೆಳೆದಿದ್ದಾರೆ. ವಿಶ್ವದ ಅತ್ಯಂತ ಸುಂದರವಾದ ಜಂಗಲ್ ಡ್ರೈವ್‌ನ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಎರಡೂ ಬದಿಗಳಲ್ಲಿ […]