ಶ್ರೀಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ
ಉಡುಪಿ: ಶ್ರೀಕೃಷ್ಣಮಠದ ಕನಕಗೋಪುರದ ಮುಂಭಾಗದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥಸ್ವಾಮೀಜಿ ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಬಲೀಂದ್ರ ಪೂಜೆ, ಧನಲಕ್ಷ್ಮೀ ಪೂಜೆ, ವ್ಯೋಮ ದೀಪ ವಿಶೇಷವಾಗಿ ನೆರವೇರಿತು.
ಶ್ರೀ ಕೃಷ್ಣ ಮಠದಲ್ಲಿ ಬಲೀಂದ್ರ ಪೂಜೆ
ಉಡುಪಿ: ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು,ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು “ಬಲೀಂದ್ರ ಪೂಜೆ”ಯನ್ನು ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ ಮಠದ ಎಲ್ಲಾ ಭಾಗಗಳಿಗೂ ಮತ್ತು ಪರ್ಯಾಯ ಕೃಷ್ಣಾಪುರ ಮಠಕ್ಕೂ ದೀಪವನ್ನು ಪ್ರದರ್ಶಿಸಲಾಯಿತು. ಅದಮಾರು ಮಠದಲ್ಲಿ ದೀಪಾವಳಿಯ ಬಲಿಪಾಡ್ಯಮಿ ನಿಮಿತ್ತ ಶ್ರೀ ಮಠದ ಗೋಶಾಲೆಯಲ್ಲಿರುವ ಗೋವುಗಳಿಗೆ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಅದಮಾರು […]
ಬಜಗೋಳಿ: ರವೀಂದ್ರ ಶೆಟ್ಟಿ ದಂಪತಿಗಳಿಂದ ಬಲಿಪಾಡ್ಯಮಿಯಂದು ಗೋದಾನ ಸೇವೆ
ಬಜಗೋಳಿ: ಹಿಂದುತ್ವ ಪ್ರತಿಪಾದಕ ರವೀಂದ್ರ ಶೆಟ್ಟಿ ಬಜಗೋಳಿ ಮತ್ತು ಅವರ ಧರ್ಮಪತ್ನಿ ರೂಪ ರವೀಂದ್ರ ಶೆಟ್ಟಿ ದಂಪತಿಗಳು ದೀಪಾವಳಿಯ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು, ದಾನಕ್ಕೆ ಹೆಸರುವಾಸಿಯಾದ ಬಲಿ ಚಕ್ರವರ್ತಿಯಂತೆ, ಬಡ ಮತ್ತು ಅಶಕ್ತ ಕುಟುಂಬಗಳನ್ನು ಆರ್ಥಿಕವಾಗಿ ಮೇಲೆತ್ತಲು ದ್ವಿತೀಯ ವರ್ಷದ ಗೋದಾನಕ್ಕೆ ತಮ್ಮ ಸ್ವಗ್ರಹದಲ್ಲಿ ಚಾಲನೆ ನೀಡಿದರು. ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಶೆಟ್ಟಿಯವರು ಬಡವರ ಶಿಕ್ಷಣ, ದೈವ-ದೇವಸ್ಥಾನಗಳ ಜೀರ್ಣೋದ್ಧಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆರ್ಥಿಕ ಸಹಾಯ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಹೆಬ್ರಿ, ಬೆಳ್ಮಣ್,ಮೀಯಾರು, […]
ಖಂಡಗ್ರಾಸ ಸೂರ್ಯಗ್ರಹಣ: ದೀಪಾವಳಿ ಹಬ್ಬದ ಧಾರ್ಮಿಕ ವಿಧಿವಿಧಾನಗಳ ವಿವರ
ಉಡುಪಿ: ಈ ಬಾರಿ ದೀಪಾವಳಿಯಂದೇ ಖಂಡಗ್ರಾಸ ಸೂರ್ಯಗ್ರಹಣವಿರುವುದರಿಂದ ಅಂಗಡಿ ಪೂಜೆ ಮುಂತಾದವುಗಳನ್ನು ಸೋಮವಾರದಂದು ಸಂಜೆ ಮಾಡಿದಲ್ಲಿ ಪ್ರಶಸ್ತವಾಗಿರುತ್ತದೆ. ದೀಪಾವಳಿ ಹಬ್ಬದ ಧಾರ್ಮಿಕ ವಿಧಿ ವಿಧಾನಗಳು: ಅ.23 ಭಾನುವಾರದಂದು ಸಂಜೆ ಗಂಗಾ ಸ್ಮರಣ ಪೂಜಾ, ಜಲಪೂರಣ. ನೀರು ತುಂಬುವುದು. ಅ. 24 ರಂದು ಸೋಮವಾರ ತೈಲಾಭ್ಯಂಜನ, ನರಕಚತುರ್ದಶಿ. ದೀಪಾವಳಿ, ಧನ -ಧಾನ್ಯ -ಲಕ್ಷ್ಮೀಪೂಜೆ, ಬಲಿಂದ್ರ ಪೂಜೆ. ಅ. 25 ಮಂಗಳವಾರ ಬೆಳಿಗ್ಗೆ ಗೋಪೂಜೆ; ಸಂಜೆ ಖಂಡಗ್ರಾಸ ಸೂರ್ಯಗ್ರಹಣ ಸ್ಪರ್ಶ ಕಾಲ: ಸಾಯಂಕಾಲ ಗಂ.5.06 ನಿಮಿಷ; ಗ್ರಹಣ ಮೋಕ್ಷ: ಸಾಯಂಕಾಲ […]