ಯಕ್ಷ ‘ಗಾನ ಗಂಧರ್ವ’ ಬಲಿಪ ನಾರಾಯಣ ಭಾಗವತರ ಅಗಲಿಕೆಯಿಂದ ಬಡವಾಯ್ತು ಯಕ್ಷರಂಗ
ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ ಬಲಿಪ ನಾರಾಯಣ ಭಾಗವತ ಅವರು ಗುರುವಾರದಂದು ಇಹಲೋಕ ತ್ಯಜಿಸಿ ದೇವರ ಪಾದ ಸೇರಿದ್ದಾರೆ. ಯಕ್ಷ ಗಾನದ ಗಂಧರ್ವ ಕಂಚಿನ ಕಂಠದ ಬಲಿಪರ ನಿಧನದಿಂದ ಯಕ್ಷರಂಗ ಬಡವಾಗಿದೆ. ಬಲಿಪರಿಗೆ 84 ವರ್ಷ ವಯಸ್ಸಾಗಿತ್ತು. ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಮೂಡಬಿದಿರೆಯ ಸಮೀಪದ ನೂಯಿ ಎಂಬಲ್ಲಿ ವಾಸವಾಗಿದ್ದ ಇವರು, ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ ಹಲವಾರು ವರ್ಷ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವಾರು […]