ಬ್ರಹ್ಮಾವರ: ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮ ಬೇಕರ್ಸ್ ಮೀಟ್ ಸಂಪನ್ನ

ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘ ಹಾಗೂ ಇಂಡಿಯನ್‌ ಬೇಕರಿ ಫೆಡರೇಶನ್‌ ಸಹಭಾಗಿತ್ವದಲ್ಲಿ ಸೆ. 10ರಂದು ಬ್ರಹ್ಮಾವರದ ಮದರ್‌ ಪ್ಯಾಲೇಸ್‌ ಸಭಾಂಗಣದಲ್ಲಿ ಜರಗಿದ “ಬೇಕರ್ಸ್‌ ಮೀಟ್‌’ ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವನ್ನು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತಾಧಿಕಾರಿ ಡಾ. ಪ್ರೇಮಾನಂದ ಕೆ. ಉದ್ಘಾಟಿಸಿದರು. ಬೇಕರಿ ಉದ್ಯಮವನ್ನು ಮತ್ತಷ್ಟು ಉನ್ನತಿಗೇರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಕಾನೂನುಮತ್ತು ನಿಯಮಗಳನ್ನು ಜಾರಿಗೆ ತರುತ್ತಿದ್ದು ಅದನ್ನು ಪಾಲನೆ ಮಾಡುವುದು ಅನಿವಾರ್ಯವಾಗಿದೆ. ನಮ್ಮ […]