ಮುಂದಿನ ಬಾರಿ ಚುನಾಯಿತನಾದರೆ ರಾಮಸಮುದ್ರ ಪ್ರವಾಸಿತಾಣವಾಗಿ ನಿರ್ಮಾಣ: ವಿ.ಸುನಿಲ್ ಕುಮಾರ್

ಕಾರ್ಕಳ: ಪರಶುರಾಮ ಥೀಂ ಪಾರ್ಕ್ ನಲ್ಲಿ ಭಜನಾ ಮಂದಿರ ನಿರ್ಮಾಣವಾಗುವ ಮೂಲಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭಾವನೆ ಉಂಟಾಗಿದೆ. ಜನರಿಂದ ಆಯ್ಕೆಯಾದ ಬಳಿಕ ಮೂಲಸೌಕರ್ಯಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಪ್ರವಾಸೋದ್ಯಮವೂ ಸೇರಿದಂತೆ ಎಲ್ಲ ಆಯಾಮಗಳಲ್ಲಿ ಪ್ರಗತಿ ಸಾಧಿಸಲು ಪ್ರಯತ್ನಿಸಿದ್ದು, ಮುಂದಿನ ಬಾರಿ ಚುನಾಯಿತಗೊಂಡರೆ ಮುಂದಿನ ಎರಡು ವರ್ಷಗಳೊಳಗೆ ಕಾರ್ಕಳದ ಐತಿಹಾಸಿಕ ರಾಮಸಮುದ್ರವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಶನಿವಾರದಂದು ಕಾರ್ಕಳದ ಪರಶುರಾಮ […]

ವ್ಯಕ್ತಿಯ ಜೀವನದ ಮೊದಲ 25 ವರ್ಷಗಳು ಆತನ ಸಂಪೂರ್ಣ ಜೀವನವನ್ನು ರೂಪಿಸುತ್ತದೆ: ವಿದ್ಯಾವಂತ ಆಚಾರ್ಯ

ಕಾರ್ಕಳ: ಅಕ್ಷರಂ ಬ್ರಹ್ಮಾಸಿ ಎಂದರೆ ‘ಅಕ್ಷರವೇ ದೇವರು’. ಯಾರು ಅದನ್ನು ಹೇಳಿಕೊಡುತ್ತಾರೆ ಅವರು ದೇವರಿಗೆ ಸಮಾನ. ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಣಕ್ಕಿರುವ ಮಹತ್ವ ಬೇರೆ ಯಾವ ಚಟುವಟಿಕೆಗಳಿಗೂ ಇಲ್ಲ. ನಮ್ಮ ಜೀವನದ ಮೊದಲ 25 ವರ್ಷಗಳು ಏನು ಮಾಡುತ್ತೇವೆ, ಅದೇ ನಮ್ಮ ಮುಂದಿನ 75 ವರ್ಷ ನಾವು ಪಾಲಿಸಿಕೊಂಡು ಹೋಗುತ್ತೇವೆ. ಹೀಗಾಗಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಎಳವೆಯಲ್ಲೇ ಒಳ್ಳೆಯ ವಿಚಾರಗಳನ್ನು ತಿಳಿಹೇಳಬೇಕು ಎಸ್.ಆರ್.ಎಸ್ ನ ನಿರ್ದೇಶಕ ವಿದ್ಯಾವಂತ ಆಚಾರ್ಯ ಅಭಿಪ್ರಾಯಪಟ್ಟರು. ಅವರು ಜ. […]

ಮಾಂಡವಿ ಏಕ್ರೋಪೊಲಿಸ್ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಮಾಂಡವಿ ಏಕ್ರೋಪೊಲಿಸ್ ನ ನಿವಾಸಿಗಳೆಲ್ಲರೂ ಸೇರಿ ನಡೆಸಿದಂತಹ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ಬೈಲೂರು ಮಹಿಷಿ ಮರ್ದಿನಿ ಶಾಲೆಯ ಬಳಿ ಇರುವ ಗದ್ದೆಯಲ್ಲಿ ಅತ್ಯಂತ ಅದ್ದೂರಿಯಾಗಿ ಜರಗಿತು. ಮಾಂಡವಿ ಬಿಲ್ಡರ್ಸ್ ನ ಪ್ರಮುಖರಾದ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ತೆಂಗಿನ ಗರಿಯ ಹೂವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾಂಡವಿ ಏಕ್ರೋಪೊಲಿಸ್ ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಕೆಸರಿನ ಆಟದ  ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ಲೆಂಡ್ ಡಯಾಸ್, […]