ರಂಗದಲ್ಲೇ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಯಕ್ಷಗಾನ ಕಲಾವಿದ

ಬೈಂದೂರು :ಜಲವಳ್ಳಿ ಮೇಳದ ಖ್ಯಾತ ಕಲಾವಿದ ಹುಡುಗೋಡು ಚಂದ್ರಹಾಸ(52) ಅವರು ತಾಲ್ಲೂಕಿನ ಯಳಜಿತ ಗ್ರಾಮದ ಜೋಗಿಜಡ್ಡು ಎಂಬಲ್ಲಿ ಭಾನುವಾರ ರಾತ್ರಿ ಯಕ್ಷಗಾನ ಮಾಡುತ್ತಿರುವಾಗಲೇ ಹೃದಯಾಘಾತ ಸಂಭವಿಸಿ ರಂಗ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಂದೂರಿನಲ್ಲಿ ಕಲಾಧರ ಯಕ್ಷಗಾನ ಬಳಗ ಜಲವಳ್ಳಿ, ಮೇಳದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನದಲ್ಲಿ ಅತಿಥಿ ಕಲಾವಿದರಾಗಿ ಕುಣಿಯುತ್ತಿದ್ದಾಗ ರಂಗದಲ್ಲಿಯೇ ಹುಡುಗೋಡು ಚಂದ್ರಹಾಸ ಅವರು ಕುಸಿದು ಬಿದ್ದಿದ್ದಾರೆ. ಘಟನೆ ನಡೆಯುತ್ತಿದ್ದಂತೆಯೇ ದಿಗ್ಬಾಂತರಾದ ಮೇಳದ ಕಲಾವಿದರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅವರ ಜೀವವನ್ನು ಉಳಿಸಿಕೊಳ್ಳಲಾಗಲಿಲ್ಲ. ಸಾಲ್ವನ‌ ಪಾತ್ರದಲ್ಲಿ […]

ಅಮಾನವೀಯ: ಸರಪಳಿಯಿಂದ ವ್ಯಕ್ತಿಯ ಕೈಕಾಲು ಕಟ್ಟಿ ಬೀಗ ಜಡಿದರು!

ಕುಂದಾಪುರ: ಕೇರಳ ಮೂಲದ ವ್ಯಕ್ತಿಯೋರ್ವನ ಕಾಲಿಗೆ ಸರಪಳಿಯಿಂದ ಸುತ್ತಿ ಬೀಗ ಜಡಿದು ಗಿಡವೊಂದಕ್ಕೆ ಕಟ್ಟಿ ಹಾಕಿರುವ ಅಮಾನವೀಯ ಘಟನೆ ಬೈಂದೂರಿನ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಶನಿವಾರ ಬೆಳಕಿಗೆ ಬಂದಿದೆ. ಕಿರಿಮಂಜೇಶ್ವರ ಆಸ್ಪತ್ರೆಯ ಅನತಿ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ವ್ಯಕ್ತಿಯೋರ್ವನನ್ನು ಸರಪಳಿಯಿಂದ ಕಾಲಿಗೆ ಬಿಗಿದು ಗಿಡವೊಂದಕ್ಕೆ ಕಟ್ಟಿರುವುದನ್ನು ನೋಡಿದ ವಾಹನ ಸವಾರರು ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಸರಪಳಿಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಬೀಗ ಹಾಕಿದ್ದರಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. […]