ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ: 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಅನ್ವಯ
ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಪ್ರತಿ ತಿಂಗಳ ಮೂರನೇ ಶನಿವಾರದಂದು ಬ್ಯಾಗ್ ರಹಿತ ದಿನವನ್ನು ಆಚರಿಸಲು ಶಾಲೆಗಳಿಗೆ ಸೂಚನೆ ನೀಡಿದೆ. ಒಂದನೇ ತರಗತಿಯಿಂದ ಎಂಟನೇ ತರಗತಿ ವರೆಗಿನ ಮಕ್ಕಳಿಗೆ ಮೂರನೇ ಶನಿವಾರದಂದು ಬ್ಯಾಗ್ ರಹಿತ ದಿನ ಅನ್ವಯವಾಗಲಿದೆ. ಮಣ ಭಾರದ ಶಾಲಾ ಬ್ಯಾಗ್ ಗಳಿಂದ ಮಕ್ಕಳಿಗೆ ಮುಕ್ತಿ ದೊರಕಿಸಿ, ಶಾಲಾ ಶಿಕ್ಷಣವನ್ನು ಆನಂದದಾಯಕ ಮತ್ತು ಚಟುವಟಿಕೆಯುಕ್ತ ಮಾಡುವಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.