ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಸಭೆ: ಶೇ.15 ಡಿವಿಡೆಂಡ್ ಘೋಷಣೆ
ಉಡುಪಿ: ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯು ಸೆ.17 ರವಿವಾರದಂದು ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಇವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡು ಟೌನ್ ಹಾಲ್‌ನಲ್ಲಿ ಜರಗಿತು. ಸಹಕಾರಿ ತತ್ವಗಳೊಂದಿಗೆ ಸದಾ ಸಮರ್ಪಣಾಭಾವದ ಸಂಗಮವಾಗಿ ಸಮೃದ್ಧಿಯ ಹಸಿರ ಹೆಮ್ಮರವಾಗಿ ಬೆಳೆದು ಜಿಲ್ಲೆಯಲ್ಲಿ ವಿಭಿನ್ನ ಛಾಪು ಮೂಡಿಸಿ ರಾಜ್ಯದಲ್ಲಿಯೇ ಸಹಕಾರಿ ರಂಗದ ಮಾದರಿ ಸಹಕಾರ ಸಂಘವಾಗಿ ಸಂಘವು ಗುರುತಿಸಲ್ಪಟ್ಟಿದೆ. 1918 ರಲ್ಲಿ ಆರಂಭಗೊಂಡು ಸಹಕಾರಿ ಸದಾಶಯಗಳ ಹಾದಿಯಲ್ಲಿ ಶತಮಾನೋತ್ತರ ಕ್ರಮಿಸುವಿಕೆಯೊಂದಿಗಿರುವ […]