ಶಾರದಾ ಇಂಟರ್ನ್ಯಾಷನಲ್ ಹೋಟೇಲ್ ಮಾಲೀಕ ಬಿ. ಸುಧಾಕರ್ ಶೆಟ್ಟಿ ನಿಧನ

ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿ ಇರುವ ಶಾರದಾ ಇಂಟರ್ನ್ಯಾಷನಲ್ ಹೋಟೇಲ್ ಮಾಲೀಕ ಬಿ. ಸುಧಾಕರ್ ಶೆಟ್ಟಿ(72) ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಸುಧಾಕರ್ ಶೆಟ್ಟಿಯವರು ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. 2009 ರಿಂದ 2012 ರವರೆಗೆ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿದಿದ್ದ ಇವರು 1999 ರಲ್ಲಿ ಉಡುಪಿ ವಿಧಾನಸಭೆ ಚುನಾವಣೆಯಲ್ಲಿ ಯು.ಆರ್ ಸಭಾಪತಿ ವಿರುದ್ದ ಸೋಲು ಕಂಡಿದ್ದರು. 2004 ರಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದ ಸಂದರ್ಭದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. […]