ಅರ್ಧ ಶತಕ ಬಾರಿಸಿದ ಕಾಂತಾರ: ಪಂಜುರ್ಲಿ ಮತ್ತು ಗುಳಿಗ ದೈವದ ಆಶೀರ್ವಾದವೆಂದ ರಿಷಬ್ ಶೆಟ್ಟಿ

ಜಗತ್ತಿನಾದ್ಯಂತ ಹಿರಿ-ಕಿರಿ ಎಂಬ ಬೇಧವಿಲ್ಲದೆ ಎಲ್ಲರ ಹೃದಯಗಳನ್ನು ಗೆದ್ದ ಕಾಂತಾರ ಚಿತ್ರವು ಯಶಸ್ವಿ 50 ದಿನಗಳನ್ನು ಪೂರೈಸಿದೆ. ಚಿತ್ರವೊಂದು ಎಷ್ಟು ಕೋಟಿ ಗಳಿಸಿತು ಎನ್ನುವುದನ್ನೇ ಲೆಕ್ಕ ಹಾಕುತ್ತಿದ್ದ ಈ ದಿನಗಳಲ್ಲಿ, ಹಿಂದಿನಂತೆ ಚಿತ್ರ ಎಷ್ಟು ದಿನ ಓಡಿತು ಎಂದು ಕೇಳುವುದನ್ನು ಮರೆತೇ ಬಿಟ್ಟಿದ್ದ ಕಾಲಘಟ್ಟದಲ್ಲಿ ಕಾಂತಾರ ಚಿತ್ರವು 50 ದಿನಗಳನ್ನು ಪೂರೈಸಿರುವುದು ಚಿತ್ರತಂಡದಲ್ಲಿ ಸಂತಸ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ,” ನಮಗೆ ದಿವ್ಯ ಸಂಭ್ರಮದ ಕ್ಷಣ. ಜಗತ್ತಿನಾದ್ಯಂತ […]

ಕಾಂತಾರದ ಮೈನವಿರೇಳಿಸುವ ಹಿನ್ನೆಲೆ ಸಂಗೀತದ ಮಾಂತ್ರಿಕ ಬಿ. ಅಜನೀಶ್ ಲೋಕನಾಥ್: ಕಾಂತಾರ ಯಶಸ್ಸಿನ ಹಿಂದೆ ಜನಪದ ಸಂಗೀತದ ಛಾಪು

ತುಳುನಾಡಿನ ನಂಬಿಕೆ ಮತ್ತು ಆಚರಣೆಗಳನ್ನು ಅತ್ಯಮೋಘವಾಗಿ ಬಿಂಬಿಸಿರುವ ಕಾಂತಾರ ಚಿತ್ರದ ಯಶಸ್ಸಿನ ಹಿಂದೆ ಅದರ ಸಂಗೀತ ಮತ್ತು ಹಿನ್ನೆಲೆ ಸಂಗೀತವೂ ಕೆಲಸ ಮಾಡಿದೆ. ಚಿತ್ರದ ಮನಮೋಹಕ ಹಾಡುಗಳಾಗಿರಲಿ, ಜನ ಕೈ ಮುಗಿಯುತ್ತಿರುವ, ಅಥವಾ ಮೈಮೇಲೆ ಆವೇಶ ಬಂದಂದಾಡುತ್ತಿರುವ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ದೈವಾರಾಧನೆಯ ಹಿನ್ನೆಲೆ ಸಂಗೀತವೆ ಇರಲಿ ಇದರ ಸಂಪೂರ್ಣ ಶ್ರೇಯ ಕನ್ನಡದ ಸಂಗೀತ ಮಾಂತ್ರಿಕ ಬಿ.ಅಜನೀಶ್ ಲೋಕನಾಥ್ ಅವರಿಗೆ ಸಲ್ಲಬೇಕು. ಕರಾವಳಿಯ ದೈವಾರಾಧನೆಯ, ಭೂತ-ಕೋಲದ ಸಂಸ್ಕೃತಿಯನ್ನು ಹತ್ತಿರದಿಂದ ಕಂಡವರಿಗೆ, ಬಾಲ್ಯದಿಂದಲೂ ಇದನ್ನು ಅನುಭವಿಸಿದವರಿಗೆ ಈ ಹಿನ್ನೆಲೆ […]