ಔರಾ ಕೆಫೆ&ಕೇಕ್ ಶಾಪ್ ಶುಭಾರಂಭ

ಉಡುಪಿ: ನಗರದ ಹೊಸ ಬಸ್ ನಿಲ್ದಾಣದ ಬಳಿಯ ಜಿ.ಬಿ. ಪಂತ್ ರಸ್ತೆಯಲ್ಲಿರುವ ಗ್ರಾಸ್ ಲಾಂಡ್ ಕಾಂಪ್ಲೆಕ್ಸ್ ನಲ್ಲಿ ಔರಾ ಕೆಫೆ ಶಾಪ್ ಭಾನುವಾರಂದು ಶುಭಾರಂಭಗೊಂಡಿತು. ಸೇಂಟ್ ಆಂಟೋನಿ ಆರ್ಥೊಡಾಕ್ಸ್ ಚರ್ಚ್ ಕೊಳಲಗಿರಿ ಇದರ ಧರ್ಮಗುರು ಫಾ.ಡೇವಿಡ್ ಕ್ರಾಸ್ತಾ ಬೇಕರಿಯನ್ನು ಉದ್ಘಾಟಿಸಿದರು. ಬೇಕರಿ ಮಾಲೀಕರಾದ ನಿಶಾನ್ ಡಿಸೋಜಾ ಮತ್ತು ನೆಯಾನ್ ಡಿಸೋಜಾ ಉಪಸ್ಥಿತರಿದ್ದರು. ಔರಾ ಕೆಫೆ ಶಾಪ್ ನಲ್ಲಿ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್, ಬೇಕರಿ ಉತ್ಪನ್ನಗಳು, ಚಾಕೋಲೇಟ್ ಗಳು ಹಾಗೂ ಪೆಸ್ಟ್ರಿಗಳು ದೊರೆಯುತ್ತವೆ.