ಕಾರ್ಕಳ: ಜೂ. 21 ರಂದು ಶ್ರೀ ಕ್ಷೇತ್ರ ಅತ್ತೂರು ಪರ್ಪೆಲೆಗಿರಿಗೆ ಶಿಲಾಯಾತ್ರೆ

ಕಾರ್ಕಳ: ಕಲ್ಕುಡ ಸ-ಪರಿವಾರ ದೈವಸ್ಥಾನ ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯ ಪುನರುತ್ಥಾನದ ನಿಮಿತ್ತ ಜೂ. 21 ರಂದು ಬೆಳಿಗ್ಗೆ 7:30 ಗಂಟೆಗೆ ಶಿಲಾಯಾತ್ರೆ ನಡೆಯಲಿದೆ. ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆರಂಭವಾಗುವ ಶಿಲಾಯಾತ್ರೆ ಅನಂತಶಯನ ಮಾರ್ಗವಾಗಿ ಗೊಮ್ಮಟ ಬೆಟ್ಟ, ಆನೆಕೆರೆ, ಶ್ರೀ ಕೃಷ್ಣ ದೇವಸ್ಥಾನ, ಬಾಲಾಜಿ ಅಯ್ಯಪ್ಪ ಶಿಬಿರ, ದೂಪದಕಟ್ಟೆಯಿಂದ ಅತ್ತೂರು ಪರ್ಪಲೆಗಿರಿಗೆ ತಲುಪಲಿದೆ. ನಂತರ 10 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶಿಲಾಪೂಜೆ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

ಜ. 22 ರಿಂದ 26 ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಕ್ಷೇತ್ರದ ವಾರ್ಷಿಕ ಉತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ‘ನೀವು ನನಗೆ ಸಾಕ್ಷಿಗಳಾಗುವಿರಿ’ ಎಂಬ ವಿಷಯದೊಂದಿಗೆ ಜ. 22 ರಿಂದ 26 ರವರೆಗೆ ಜರಗಲಿದ್ದು ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ. ಜ. 22ರ ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ, ಜ. 23 ರಂದು ಬೆಳಿಗ್ಗೆ 10ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಯಿಲ್, ಜ. 24 […]

ಕಾರ್ಕಳ: ಪರ್ಪಲೆಗಿರಿಯಲ್ಲಿ ದೈವಸ್ಥಾನ ನಿರ್ಮಾಣಕ್ಕಾಗಿ ಭೂ ನಿಧಿ ಸಂಚಯನಕ್ಕೆ ಚಾಲನೆ

ಕಾರ್ಕಳ: ಇಲ್ಲಿನ ಅತ್ತೂರು ಪರ್ಪಲೆಗಿರಿಯಲ್ಲಿ ಶುಕ್ರವಾರದಂದು ಭೂ ನಿಧಿ ಸಂಚಯನದ ಅಂಗವಾಗಿ ಕೇಂಜ ಶ್ರೀಧರ ತಂತ್ರಿಯವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಪರ್ಪಲೆಗಿರಿಯಲ್ಲಿ ದೈವಸ್ಥಾನ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿಯೇ ಚಾಲನೆ ದೊರೆಯಲಿದ್ದು, ದೇವಸ್ಥಾನ ಮತ್ತು ದೈವಸ್ಥಾನ ನಿರ್ಮಾಣ ಹಾಗೂ ಇತರ ಧಾರ್ಮಿಕ ಸಾಮಾಜಿಕ ಕಾರ್ಯಗಳಿಗಾಗಿ ಜಮೀನಿನ ಅವಶ್ಯಕತೆ ಇರುವುದರಿಂದ ಭೂ ನಿಧಿ ಸಂಚಯನ ಯೋಜನೆಯನ್ನು ಹಮ್ಮಿಕೊಂಡಿದ್ದು ( 0.25 ಸೆಂಟ್ಸ್(3,000/-), 0.50 ಸೆಂಟ್ಸ್(6,000/-),1 ಸೆಂಟ್ಸ್(12,000/-) 2 ಸೆಂಟ್ಸ್(24,000/-), 5 ಸೆಂಟ್ಸ್(60,000/-),10 ಸೆಂಟ್ಸ್(1,20,000/-), 25 ಸೆಂಟ್ಸ್ (3 […]

ಕಾರ್ಕಳದ ಅತ್ತೂರು ಬೆಸಿಲಿಕಾ ಚರ್ಚಿನಲ್ಲಿ ಸಂಭ್ರಮದ ವಾರ್ಷಿಕೋತ್ಸವಾಚರಣೆಗಳು ಪ್ರಾರಂಭ

ಕಾರ್ಕಳ: ಫೆ.20, ಭಾನುವಾರದಂದು, ಅತ್ತೂರಿನ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾದ ವಾರ್ಷಿಕ ಉತ್ಸವದ ಆಚರಣೆಗಳು ಸಂಭ್ರಮದಿಂದ ಆರಂಭವಾಯಿತು. ಜನವರಿ ಕೊನೆಯ ವಾರದಲ್ಲಿ ನಡೆಯಬೇಕಿದ್ದ ವಾರ್ಷಿಕ ಹಬ್ಬವನ್ನು ಕೋವಿಡ್ ಭೀತಿಯಿಂದಾಗಿ ಮುಂದೂಡಲಾಗಿತ್ತು. ಭಾನುವಾರ ಬೆಳಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಬೆಳಗಿನ ಜಾವ ನಡೆದ ಹಬ್ಬದ ಪವಿತ್ರ ಆಚರಣೆಯ ಅಧ್ಯಕ್ಷತೆಯನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ವಹಿಸಿದ್ದರೆ, ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು.   […]