ಆಟಿ ತಿಂಗಳ ಆಹಾರ ಔಷದೀಯ ಗುಣ ಹೊಂದಿದ್ದವು: ಸರಳಾ ‌ಕಾಂಚನ್

ಉಡುಪಿ: ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಸೇವಿಸುತ್ತಿದ್ದ ಆಹಾರಗಳು ಔಷಧಿಯ ಗುಣಗಳನ್ನು ಹೊಂದಿದ್ದವು. ಆದರೆ ಇಂದು ನಮ್ಮ ಮಕ್ಕಳು ಫಾಸ್ಟ್‌ಫುಡ್‌ಗಳನ್ನು ತಿನ್ನುತ್ತ ಆಟಿ ಆಹಾರವನ್ನು ಮರೆತು ಬಿಡುತ್ತಿದ್ದಾರೆ. ಹೀಗಾಗಿ‌ ಆಟಿಯ ಆಹಾರಗಳ ಮಹತ್ವವನ್ನು ನಮ್ಮಮಕ್ಕಳಿಗೆ ತಿಳಿಸಿಕೊಡಬೇಕಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಸರಳಾ ಕಾಂಚನ್‌ ಹೇಳಿದರು. ಉಡುಪಿ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಆಯೋಜಿಸಿದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲ ಬದಲಾದಂತೆ ಮನುಷ್ಯನ ಜೀವನ ಶೈಲಿಯೂ ಬದಲಾಗುತ್ತಿದೆ. ಆದರೆ ಪ್ರಕೃತಿಗೆ ವಿರುದ್ಧವಾದ ಮನುಷ್ಯನ ಬದಲಾವಣೆ ಸಾಕಷ್ಟು ಪರಿಣಾಮವನ್ನು […]