ಶಿವಪಾಡಿ: ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್

ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನ ಶಿವಪಾಡಿ ಸರಳೇಬೆಟ್ಟು ಉಡುಪಿ ಇಲ್ಲಿ ನಡೆಯಲಿರುವ “ಅತಿರುದ್ರ ಮಹಾಯಾಗ”ದ ಅಂಗವಾಗಿ ಜ.29 ರಂದು “ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆ” ನಡೆಯಿತು. ಈ ಸಂದರ್ಭ ಅತಿರುದ್ರಯಾಗ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.

ಜ. 29 ರಂದು ಶಿವಪಾಡಿ ದೇವಸ್ಥಾನದಲ್ಲಿ ಅತಿರುದ್ರ ಯಾಗ ಸಂಕಲ್ಪ ದಿವಸ್ ಹಾಗೂ ಮೃತ್ತಿಕಾ ಪೂಜೆ

ಮಣಿಪಾಲ: ಇಲ್ಲಿನ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.22 ರಿಂದ ಮಾ.5 ರವರೆಗೆ ಅತಿರುದ್ರ ಯಾಗ ನಡೆಯಲಿದ್ದು, ಜ. 29 ರಂದು ಬೆಳಿಗ್ಗೆ ಅತಿರುದ್ರ ಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆಯನ್ನು ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ, ಶ್ರೀ ವಿಧುಶೇಖರ ಭಾರತೀ ಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ದೇಗುಲದಲ್ಲಿ ಪ್ರಾರ್ಥನೆ, ಯಾಗಶಾಲೆಯ ಭೂಮಿ ಪೂಜೆ, ಪುಣ್ಯತೀರ್ಥ ಕ್ಷೇತ್ರಗಳಿಂದ ತಂದ ಮೃತ್ತಿಕಾ ವಿತರಣೆ, ಸಾಮೂಹಿಕ ದೀಕ್ಷಾ ಸಂಕಲ್ಪ […]