ಹೆಬ್ರಿ: ಅಟಲ್ ಜನಸ್ನೇಹಿ ಕೇಂದ್ರ ಲೋಕಾರ್ಪಣೆ ಮಾಡಿದ ಇಂಧನ ಸಚಿವ ಸುನಿಲ್ ಕುಮಾರ್

ಉಡುಪಿ: ಹೆಬ್ರಿಯನ್ನು ತಾಲ್ಲೂಕಾಗಿ ಪರಿವರ್ತಿಸಿದ್ದು, ತಾಲ್ಲೂಕು ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ನಾಡಾ ಕಚೇರಿ, ಅಟಲ್ ಜನಸ್ನೇಹಿ ಕೇಂದ್ರ ಇಲ್ಲದೆ ಜನತೆಯ ಕಚೇರಿ ಕೆಲಸಗಳಿಗೆ ಸಮಸ್ಯೆಯಾಗಿದ್ದು, ಈಗ ನೂತನ ತಾಲ್ಲೂಕು ಕಟ್ಟಡದ ಲೋಕಾರ್ಪಣೆಯ ವೇಳೆ ಅಟಲ್ ಜನಸ್ನೇಹಿ ಕೇಂದ್ರ ಆರಂಭವಾಗಿರುವುದು ಅತ್ಯಂತ ಖುಷಿ ನೀಡಿದೆ. ಜನರ ಸೇವೆಗೆ ನಾವು ಸದಾ ಸಿದ್ಧ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಇಂದು ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ಆರಂಭಗೊಂಡ […]