ದೂರದ ನಕ್ಷತ್ರಪುಂಜದಿಂದ ಸಂಕೇತವನ್ನು ಪತ್ತೆ ಮಾಡಿದ ಕೆನಡಾ ಮತ್ತು ಭಾರತೀಯ ಖಗೋಳಶಾಸ್ತ್ರಜ್ಞರು
ಪುಣೆ: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮತ್ತು ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಬಹುದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್‌ನಿಂದ ಹುಟ್ಟಿಕೊಂಡಿರುವ ರೇಡಿಯೋ ಸಂಕೇತವನ್ನು ಪತ್ತೆ ಮಾಡಿದ್ದಾರೆ. ಪುಣೆಯಲ್ಲಿನ ದೈತ್ಯ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (GMRT) ಅನ್ನು ಉಪಯೋಗಿಸಿಕೊಂಡು ವಿಜ್ಞಾನಿಗಳು ಈ ಡೇಟಾವನ್ನು ಕಂಡುಹಿಡಿದಿದ್ದಾರೆ. ಈ ಸಂಕೇತವು ಇದುವರೆಗೆ ಕಂಡುಹಿಡಿದ “ಅತ್ಯಂತ ದೂರದಿಂದ ಬಂದಿರುವ ಅತಿ ದೊಡ್ಡ ಸಂಕೇತ”ವಾಗಿದೆ ಎಂದು ಐಐಎಸ್‌ಸಿ ತಿಳಿಸಿದೆ. ಸಂಶೋಧನೆಗಳನ್ನು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ನೋಟಿಸ್ ನಲ್ಲಿ ಪ್ರಕಟಿಸಲಾಗಿದೆ. ಮೆಕ್‌ಗಿಲ್ […]
ಭೂಮಿಗೆ ಬಂತು ‘ಗುರು’ ಬಲ: 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿರುವ ಬೃಹಸ್ಪತಿ
ಖಗೋಳ ಶಾಸ್ತ್ರದ ಕುತೂಹಲಿಗಳಿಗೆ ಸಂಭ್ರಮಿಸುವ ಕ್ಷಣವೊಂದು ಸೋಮವಾರ, ಸೆಪ್ಟೆಂಬರ್ 26ರಂದು ದೊರಕಲಿದೆ. ಸೌರಮಂಡಲದ ಅತ್ಯಂತ ಬಲಶಾಲಿ ಅನಿಲ ದೈತ್ಯ ಗ್ರಹವಾದ ಗುರು ಅಥವಾ ಬ್ರಹಸ್ಪತಿಯು 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿದೆ. ಆ ದಿನದಂದು ಭೂಮಿಯಿಂದ ನೋಡಿದಾಗ ಗುರುವು ಸೂರ್ಯನ ನೇರ ಎದುರು ಅಂದರೆ ಸೂರ್ಯನ ವಿರುದ್ದ ದಿಕ್ಕಿನಲ್ಲಿರುತ್ತದೆ. ಈ ಖಗೋಳ ವ್ಯವಸ್ಥೆಯನ್ನು ‘ವಿರೋಧ’ ಎಂದು ಕರೆಯಲಾಗುತ್ತದೆ. ಸೂರ್ಯ ಪಶ್ಚಿಮದಲ್ಲಿ ಮುಳುಗುವಾಗ ಗ್ರಹವು ಪೂರ್ವದಲ್ಲಿ ಉದಯಿಸುವುದನ್ನು ವಿರೋಧ ಎನ್ನುತ್ತಾರೆ. ಈ ಸಮಯದಲ್ಲಿ ಗುರುವು ಅಸಾಮಾನ್ಯ […]
ವಿಶ್ವದ ಮೊದಲ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ ಸ್ಥಾಪನೆ: ಖಗೋಳ ಜಗತ್ತಿನಲ್ಲಿ ಭಾರತದ ಸಾಧನೆ!
ನವದೆಹಲಿ: ಭಾರತವು ತನ್ನ ಮೊಟ್ಟಮೊದಲ ‘ಲಿಕ್ವಿಡ್ ಮಿರರ್ ಟೆಲಿಸ್ಕೋಪ್’ ಅನ್ನು ಉತ್ತರಾಖಂಡದ ದೇವಸ್ಥಲ್ ವೀಕ್ಷಣಾಲಯದಲ್ಲಿ ಸ್ಥಾಪಿಸಿದೆ. ಏಷ್ಯಾದ ಅತಿದೊಡ್ಡ ಅಂತಾರಾಷ್ಟ್ರೀಯ ಲಿಕ್ವಿಡ್ ಮಿರರ್ ಟೆಲಿಸ್ಕೋಪ್ (ಐ ಎಲ್ ಎಂ ಟಿ) ಅನ್ನು 2,450 ಮೀಟರ್ ಎತ್ತರದಲ್ಲಿ ಸ್ಥಾಪಿಸಲಾಗಿದೆ. ಆರ್ಯಭಟ್ಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ARIES) ಒಡೆತನದ ದೇವಸ್ಥಲ್ ವೀಕ್ಷಣಾಲಯದ ಕ್ಯಾಂಪಸ್‌ನಲ್ಲಿರುವ ಐ ಎಲ್ ಎಂ ಟಿ, ಖಗೋಳಶಾಸ್ತ್ರಕ್ಕಾಗಿ ನಿಯೋಜಿಸಲಾದ ವಿಶ್ವದ ಮೊದಲ ದ್ರವ-ಕನ್ನಡಿ ದೂರದರ್ಶಕವಾಗಿದೆ. ಪ್ರಪಂಚದ ಅಂಚಿನಲ್ಲಿರುವ ಗೆಲಕ್ಸಿಗಳು ಮತ್ತು ಇತರ ಖಗೋಳ ಅಂಶಗಳನ್ನು […]