ಆಹಾರದ ಬದಲಾವಣೆಯು ಅಸ್ತಮಾ ರೋಗವನ್ನು ನಿರ್ವಹಿಸುವಲ್ಲಿ ಸಹಾಯ ಮಾಡಬಹುದು: ಡಾ. ಸುದರ್ಶನ್ ಕೆ.ಎಸ್.

ವ್ಯಕ್ತಿಯಲ್ಲಿ ಉಸಿರಾಟದ ವಾಯು ಮಾರ್ಗಗಳು ಉರಿಯೂತಕ್ಕೊಳಗಾವುದು, ಕಿರಿದಾಗುವುದು ಮತ್ತು ಊದಿಕೊಳ್ಳುವುದು ಮತ್ತು ಹೆಚ್ಚುವರಿ ಲೋಳೆಯ ಉತ್ಪತ್ತಿಯಾಗುವ ಸ್ಥಿತಿಯನ್ನು ಆಸ್ತಮಾ ಎನ್ನುತ್ತಾರೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಆಸ್ತಮಾ ಅಲ್ಪ ಪ್ರಮಾಣದ್ದಾಗಿರಬಹುದು ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವಂತಹುದ್ದಾಗಿರಬಹುದು. ಕೆಲವೊಮ್ಮೆ ಇದು ಮಾರಣಾಂತಿಕ ಆಸ್ತಮಾ ದಾಳಿಗೆ ಕಾರಣವಾಗಬಹುದು. ಆಸ್ತಮಾ ಸಮಸ್ಯೆಯು ಉಸಿರಾಟದ ತೊಂದರೆ, ಎದೆ ನೋವು, ಕೆಮ್ಮು ಮತ್ತು ಉಬ್ಬಸವನ್ನು ಉಂಟುಮಾಡಬಹುದು. ರೋಗಲಕ್ಷಣಗಳು ಕೆಲವೊಮ್ಮೆ ಉಲ್ಬಣಗೊಳ್ಳಬಹುದು. ಆಹಾರ ಪದ್ಧತಿಯು ರೋಗಿಗಳಲ್ಲಿ ಆಸ್ತಮಾ ಪರಿಸ್ಥಿತಿಯನ್ನು ಹೆಚ್ಚಿಸಬಹುದು ಅಥವಾ ಸ್ವಲ್ಪ ಪರಿಹಾರ ಉಂಟುಮಾಡಬಹುದು […]