ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಜಂಬೂ ಸವಾರಿ, ಜೀಪ್ ಸಫಾರಿ

ಗುವಾಹಾಟಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಮಾರ್ಚ್ 9 ರಂದು ಪ್ರಧಾನಿ ನರೇಂದ್ರ ಮೋದಿ ಆನೆ ಸವಾರಿ ಮಾಡಿದರು. ಪಾರ್ಕ್‌ನ ಸೆಂಟ್ರಲ್ ಕೊಹೊರಾ ರೇಂಜ್‌ನ ಮಿಹಿಮುಖ್ ವಿಭಾಗದಲ್ಲಿ, ಮೊದಲು ಆನೆ ಸಫಾರಿ, ನಂತರ ಅದೇ ವ್ಯಾಪ್ತಿಯಲ್ಲಿ ಅವರು ಜೀಪ್ ಸಫಾರಿ ನಡೆಸಿದರು. ಅವರ ಭೇಟಿಯ ಸಂದರ್ಭದಲ್ಲಿ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಅರಣ್ಯ ರಕ್ಷಕರ ತಂಡ ‘ವನ ದುರ್ಗ’ ದೊಂದಿಗೆ ಸಂವಾದ ನಡೆಸಿದರು. ಲಖಿಮಾಯಿ, ಪ್ರದ್ಯುಮ್ನ ಮತ್ತು […]

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಸೇರಿತು ಅಸ್ಸಾಂನ ಸಾಂಪ್ರದಾಯಿಕ ಬಿಹು ನೃತ್ಯ ಪ್ರದರ್ಶನ

ಗುವಾಹಟಿ: ಭಾರತದ ಈಶಾನ್ಯ ರಾಜ್ಯ ಅಸ್ಸಾಂ ಗುರುವಾರ ಒಂದೇ ಸ್ಥಳದಲ್ಲಿ ಸಾಂಪ್ರದಾಯಿಕ ಬಿಹು ನೃತ್ಯವನ್ನು ಪ್ರದರ್ಶಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ಗುರುತಿಸಿದೆ. ಗುವಾಹಟಿಯ ಸರುಸಜೈ ಸ್ಟೇಡಿಯಂನಲ್ಲಿ ಗಿನ್ನೆಸ್ ಪುಸ್ತಕದಲ್ಲಿ ತನ್ನ ವಿಶ್ವ ದಾಖಲೆಯನ್ನು ನೋಂದಾಯಿಸುವ ಪ್ರಯತ್ನದಲ್ಲಿ 11,000 ಕ್ಕೂ ಹೆಚ್ಚು ಕಲಾವಿದರು, ಡೋಲು ವಾದಕರು ಮತ್ತು ನೃತ್ಯಗಾರರು ಭಾಗವಹಿಸಿದರು. https://twitter.com/i/status/1647105773854416896 ಕಾರ್ಯಕ್ರಮದ ಸಮಯದಲ್ಲಿ, ಪ್ರದರ್ಶಕರಲ್ಲಿ ಗಾಯಕರು ಮತ್ತು ರಾಜ್ಯದ ಸಾಂಪ್ರದಾಯಿಕ ವಾದ್ಯಗಳಾದ ಧೋಲ್, ತಾಲ್, ಗೊಗೊನಾ, ಟೋಕಾ, ಪೆಪಾ ಮತ್ತು […]

ಭಾರತದಿಂದ ಬಾಂಗ್ಲಾವರೆಗೆ 3,200 ಕಿ.ಮೀ ಉದ್ದದ ‘ಗಂಗಾವಿಲಾಸ’: ವಿಶ್ವದ ಅತಿ ಉದ್ದದ ನೌಕಾ ವಿಹಾರಕ್ಕೆ ಚಾಲನೆ

ನವದೆಹಲಿ: ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ವಿಶ್ವದಲ್ಲೇ ಅತಿ ಉದ್ದದ ನದಿಯ ಮೂಲಕದ ನೌಕಾ ವಿಹಾರ ‘ಗಂಗಾವಿಲಾಸ’ ಯೋಜನೆಗೆ ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಐಷಾರಾಮಿ ಕ್ರೂಸರ್ ಈ ವಾರ ತನ್ನ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಭಾರತದ ಕೆಲವು ಪ್ರಸಿದ್ಧ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ಮೂಲಕ ಸುತ್ತುತ್ತಾ 27 ನದಿಗಳನ್ನು ಒಳಗೊಳ್ಳುತ್ತಾ ಭಾರತದ ಕಾಶಿಯಿಂದ ಬಾಂಗ್ಲಾ ದೇಶದವರೆಗಿನ 3,200 ಕಿ.ಮೀ. ದೂರದ ಪ್ರಯಾಣವನ್ನು 51 ದಿನಗಳಲ್ಲಿ ಸಂಪೂರ್ಣಗೊಳಿಸಲಿದೆ. […]

ಏರುತ್ತಿರುವ ಇಂಧನ ಬೆಲೆಗೆ ಕಡಿವಾಣ: ಮೆಥನಾಲ್ ಮಿಶ್ರಿತ ಪೆಟ್ರೋಲ್ ಎಂ 15 ಬಿಡುಗಡೆ

ದೆಹಲಿ: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೊಸ ಮಾದರಿಯ ಪೆಟ್ರೋಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಪ್ರಾಯೋಗಿಕ ಯೋಜನೆಯಾಗಿ ಆರಂಭಿಸಲಾಗಿರುವ ಹೊಸ ಮಾದರಿಯ ಈ ಪೆಟ್ರೋಲ್ ನಿಂದಾಗಿ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಮೂಲಕ ಪೈಲಟ್ ಯೋಜನೆಯಾಗಿ ಶೇ. 15 ರಷ್ಟು ಮೆಥೆನಾಲ್ ಮಿಶ್ರಣವನ್ನು ಹೊಂದಿರುವ ಪೆಟ್ರೋಲ್ ‘ಎಂ 15’ ಅನ್ನು ಬಿಡುಗಡೆಮಾಡಲಾಗಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಶನಿವಾರ […]