ಅಸ್ಸಾಂ-ಅರುಣಾಚಲ ಗಡಿಯಲ್ಲಿ ಗುಂಡಿನ ದಾಳಿ ಇಬ್ಬರಿಗೆ ಗಾಯ ಇಬ್ಬರು ಸಾವು

ಗುವಾಹಟಿ: ಅಸ್ಸಾಂ-ಅರುಣಾಚಲಪ್ರದೇಶದ ಗಡಿಯ ಪನ್ಬರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ. ಧೇಮಾಜಿಯ ಹಲವು ಪ್ರದೇಶಗಳಲ್ಲಿ ಇದುವರೆಗೆ ಅಸ್ಸಾಂ ಹಾಗೂ ಅರುಣಾಚಲಪ್ರದೇಶದ ನಡುವಿನ ಗಡಿಯನ್ನು ಗುರುತಿಸಿಲ್ಲ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ. ”ಸಾಮಾನ್ಯವಾಗಿ, ನೆರೆಯ ರಾಜ್ಯ ನಮ್ಮ ಮೇಲೆ ಯಾವುದೇ ದಾಳಿ ಮಾಡುತ್ತಿಲ್ಲ. ಆದರೆ, ನೆರೆಯ ರಾಜ್ಯದ ಕೆಲವರು ಭೂಮಿ ವಶಪಡಿಸಿಕೊಳ್ಳುವ ದುರಾಸೆಯಿಂದ ಇಂತಹ ಚಟುವಟಿಕೆಗಳಲ್ಲಿ […]