ಏಷನ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿ: ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್-ಚಿರಾಗ್ ಗೆ ಚಿನ್ನದ ಪದಕ!!
ಏಷ್ಯನ್ ಗೇಮ್ಸ್ 2023 ರ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಈವೆಂಟ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸವನ್ನು ಸೃಷ್ಟಿಸಿದರು. ಸಾತ್ವಿಕ್-ಚಿರಾಗ್ ರಿಪಬ್ಲಿಕ್ ಆಫ್ ಕೊರಿಯಾದ ಚೋಯ್ ಸೊಲ್ಗ್ಯು ಮತ್ತು ಕಿಮ್ ವೊನ್ಹೋ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಈ ಗೆಲುವಿನೊಂದಿಗೆ ಭಾರತವು ಅಕ್ಟೋಬರ್ 7 ರ ಶನಿವಾರದಂದು ತನ್ನ ಪದಕಗಳ ಸಂಖ್ಯೆಯನ್ನು 101 ಕ್ಕೆ ಏರಿಸಿತು. ವಿಶ್ವ ನಂ. 3 ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ […]
ಮಹಿಳಾ ಕಬಡ್ಡಿ ಫೈನಲ್ ನಲ್ಲಿ ಚೈನೀಸ್ ತೈಪೆ ಸೋಲಿಸಿ ಚಿನ್ನ ಗೆದ್ದ ಭಾರತ! ಏಷ್ಯನ್ ಗೇಮ್ಸ್ ನಲ್ಲಿ ಶತಕ ಪೇರಿಸಿ ದಾಖಲೆ!!
ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಶನಿವಾರ 14 ನೇ ದಿನದಂದು ಭಾರತದ ಪದಕಗಳ ಸಂಖ್ಯೆ 100 ಕ್ಕೆ ತಲುಪಿ, ಶತಕ ಬಾರಿಸಿದೆ. ಭಾರತದ ಆರ್ಚರಿ ತಂಡವು ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು, ಜ್ಯೋತಿ ಸುರೇಖಾ, ಓಜಸ್ ಪ್ರವೀಣ್ ಡಿಯೋಟಾಲೆ ಆಯಾ ಮಹಿಳಾ ಮತ್ತು ಪುರುಷರ ಕಾಂಪೌಂಡ್ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಪಡೆದರು. ಇದೇ ವೇಳೆ ಆರ್ಚರಿಯಲ್ಲಿ ಅಭಿಷೇಕ್ ವರ್ಮಾ ಬೆಳ್ಳಿ, ಅದಿತಿ ಗೋಪಿಚಂದ್ ಕಂಚಿನ ಪದಕ ಪಡೆದರು. ಮಹಿಳಾ ಕಬಡ್ಡಿ ತಂಡ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು […]
ಏಷ್ಯನ್ ಗೇಮ್ಸ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತೀಯ ಪುರುಷರ ಕಬಡ್ಡಿ ತಂಡ
ಶುಕ್ರವಾರ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಭಾರತೀಯ ಪುರುಷರ ಕಬಡ್ಡಿ ತಂಡವು ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿತು. ಪವನ್ ಸೆಹ್ರಾವತ್ ನೇತೃತ್ವದ ಭಾರತವು ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು ಮತ್ತು ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ಧ 61-14 ಅಂತರದಿಂದ ಜಯಗಳಿಸಿತು. ಶನಿವಾರ ಇರಾನ್ ಮತ್ತು ಚೈನೀಸ್ ತೈಪೆ ನಡುವಿನ ಇನ್ನೊಂದು ಸೆಮಿಫೈನಲ್ ನಡೆಯಲಿದೆ. ಭಾರತವು ಫೈನಲ್ ನಲ್ಲಿ ಈ ಎರಡಲ್ಲಿ ವಿಜೇತರಾದ ತಂಡವನ್ನು ಎದುರಿಸಲಿದೆ. ಮೊದಲ ನಾಲ್ಕು ಅಂಕಗಳನ್ನು ಗಳಿಸಿದ ಪಾಕಿಸ್ತಾನವು ಪಂದ್ಯವನ್ನು ಬಲಿಷ್ಠವಾಗಿ […]