ಡಿಜಿಟಲ್ ವಂಚನೆ ಮೇಲೆ ಗಧಾ ಪ್ರಹಾರ: ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆ ಕಡ್ಡಾಯ; ಬಲ್ಕ್ ಸಿಮ್ ಕನೆಕ್ಷನ್ ಸ್ಥಗಿತ
ನವದೆಹಲಿ: ಡಿಜಿಟಲ್ ವಂಚನೆಯನ್ನು ತಡೆಗಟ್ಟಲು ಸರ್ಕಾರವು ಸಿಮ್ ಕಾರ್ಡ್ ಡೀಲರ್ಗಳ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬಲ್ಕ್ ಸಿಮ್ ‘ಕನೆಕ್ಷನ್’ಗಳನ್ನು ನೀಡುವ ನಿಬಂಧನೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ವೈಷ್ಣವ್, ಸಿಮ್ ಕಾರ್ಡ್ ಡೀಲರ್‌ನ ಪೊಲೀಸ್ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಹೇಳಿದ್ದಾರೆ. ಸಿಮ್ ಕಾರ್ಡ್ ಡೀಲರ್ ಪರಿಶೀಲನೆಯನ್ನು ‘ಪರವಾನಗಿದಾರ’ ಅಥವಾ ಸಂಬಂಧಪಟ್ಟ ಸಿಮ್ ಕಂಪನಿ ಮಾಡಲಿದೆ ಎಂದು ಸ್ಪಷ್ಟಪಡಿಸಿರುವ ಅವರು ಈ ಕಾನೂನಿನ […]
ಒಡಿಶಾ ತ್ರಿವಳಿ ರೈಲು ಅಪಘಾತ: ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣ; ಸೇವೆ ಪುನರಾರಂಭ
ಒಡಿಶಾ: 275 ಜನರನ್ನು ಬಲಿತೆಗೆದುಕೊಂಡ ಭೀಕರ ಬಾಲಸೋರ್ ರೈಲು ಅಪಘಾತ ಸಂಭವಿಸಿದ ವಿಭಾಗದಲ್ಲಿ ರೈಲು ಸಂಚಾರ ಪುನರಾರಂಭವಾಗಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಪ್ರಯಾಣಿಕರು ಮತ್ತು ಸಿಬ್ಬಂದಿಯತ್ತ ಕೈಬೀಸಿದರು ಮತ್ತು ಅವರ ಸುರಕ್ಷಿತ ಪ್ರಯಾಣಕ್ಕಾಗಿ ಪ್ರಾರ್ಥಿಸಿದರು. ಬಾಲಾಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಅವಧಿಯಲ್ಲಿ ಮೇಲಿನ ಮತ್ತು ಕೆಳಗಿನ ಎರಡೂ ರೈಲು ಹಳಿಗಳ ದುರಸ್ತಿ ಸಂಪೂರ್ಣವಾಗಿದ್ದು ಸೇವೆಗಳು ಪುನರಾರಂಭಗೊಂಡಿವೆ. ದುರ್ಘಟನೆಯಲ್ಲಿ275 ಜನ ಸಾವನ್ನಪ್ಪಿದ್ದು 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. […]
ಹೂಗ್ಲಿ ನದಿಯಡಿ ದೇಶದ ಅತ್ಯಂತ ಆಳದ ಮೆಟ್ರೋ ಓಟ ಯಶಸ್ವಿ: ಭೂಮೇಲ್ಮೈಯಿಂದ 33 ಮೀಟರ್ ಕೆಳಗೆ ಓಡಲಿದೆ ರೈಲು
ಕೋಲ್ಕತ್ತಾ: ಹೂಗ್ಲಿ ನದಿಯ ಅಡಿಯಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಚಾಲನೆಯನ್ನು ಮಾಡಲಾಗಿದ್ದು, ಪ್ರಥಮ ಪ್ರಯೋಗ ಯಶಸ್ವಿಯಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಶುಕ್ರವಾರ ಪ್ರಾಯೋಗಿಕ ಚಾಲನೆಯ ನಂತರ, “ರೈಲು ನೀರಿನ ಅಡಿಯಲ್ಲಿ ಚಲಿಸುತ್ತಿದೆ” ಎಂದು ವೈಷ್ಣವ್ ಟ್ವೀಟ್ ಮಾಡಿದ್ದಾರೆ. Train travels underwater!🇮🇳 👏 Trial run of train through another engineering marvel; metro rail tunnel and station under Hooghly river. pic.twitter.com/T6ADx2iCao — Ashwini Vaishnaw (@AshwiniVaishnaw) […]
ಅಕ್ಟೋಬರ್ ವೇಳೆಗೆ ದೇಶವು 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧ: ಸಂವಹನ ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ: ಈ ವರ್ಷದ ಅಕ್ಟೋಬರ್ ವೇಳೆಗೆ ದೇಶವು 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಸಂಪರ್ಕ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ವೇಗವಾಗಿ 5ಜಿ ಬಿಡುಗಡೆಗಾಗಿ ದೂರಸಂಪರ್ಕ ಮೂಲಸೌಕರ್ಯವನ್ನು ವೇಗವಾಗಿ ಮತ್ತು ಸುಲಭವಾಗಿ ನಿಯೋಜಿಸಲು ಅನುಕೂಲವಾಗುವಂತೆ ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮಗಳು, 2016 ಕ್ಕೆ ತಿದ್ದುಪಡಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಈ ಬಗ್ಗೆ ಹೇಳಿದರು. ದೇಶಾದ್ಯಂತ 5ಜಿ ಸೇವೆಗಳ ವೇಗವನ್ನು ಖಚಿತಪಡಿಸಿಕೊಳ್ಳಲು ಸುಮಾರು 4 ಮೂಲಭೂತ ಅಂಶಗಳಾದ ಮುಖ್ಯವಾಗಿ […]