ವಿಶ್ವ ವಿಸ್ಮಿತ ಮಂದಸ್ಮಿತ ಸಜೀವ ಕಣ್ಣುಗಳ ರಾಮಲಲ್ಲಾನ ನಿರ್ಮಾತೃವಿಗೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ: ರಾಮನ ಆದೇಶದಂತೆ ಕೆಲಸ ಮಾಡಿದ್ದೇನೆ ಎಂದ ಅರುಣ್ ಯೋಗಿರಾಜ್
ಬೆಂಗಳೂರು: ವಿಶ್ವವೇ ವಿಸ್ಮಿತವಾಗಿ ನೋಡುತ್ತಿರುವ ಮಂದಸ್ಮಿತ ಸಜೀವ ನೇತ್ರಗಳ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಮೈಸೂರಿನ ಅರುಣ್ ಯೋಗಿರಾಜ್ ಜ.24 ರಂದು ರಾಜ್ಯಕ್ಕೆ ಮರಳಿದ್ದಾರೆ. ಅರುಣ್ ಯೋಗಿರಾಜ್ ಅವರಿಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅರುಣ್ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಜನರು ಅರುಣ್ ಯೋಗಿರಾಜ್ ಅವರನ್ನು ಮುತ್ತಿಕೊಂಡಿದ್ದು, ಪೇಟ ತೊಡಿಸಿ ಶಾಲು ಹೊದೆಸಿ ಗೌರವಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ದೇಶಾದ್ಯಂತ ಜನರಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿರುವ ಬಗ್ಗೆ ಹರ್ಷಿತರಾಗಿರುವ ಅರುಣ್ […]
ಮೈಸೂರಿನ ಕೃಷ್ಣಶಿಲೆ, ಶಿಲ್ಪಿ ಅರುಣ್ ಯೋಗಿರಾಜ್: ಅಯೋಧ್ಯೆಯಲ್ಲಿ ಮುದ್ದು ‘ಬಾಲರಾಮ’ನಾದ ಅವಿಸ್ಮರಣೀಯ ಕ್ಷಣಕ್ಕೆ ವಿಶ್ವವೇ ಸಾಕ್ಷಿ!!
ಮೈಸೂರು: ಕರ್ನಾಟಕದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರು ನಿರ್ಮಿಸಿದ ರಾಮಲಲ್ಲಾ ಮೂರ್ತಿಯನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಸೋಮವಾರದಂದು ಶಂಕುಸ್ಥಾಪನೆ ಮಾಡಲಾಯಿತು. ನೋಡಿದರೆ ಮತ್ತೆ ಮತ್ತೆ ನೋಡಬೇಕಿನಿಸುವಷ್ಟು ಮುದ್ದಾಗಿರುವ ಈನೂತನ ವಿಗ್ರಹವು 150-200 ಕೆಜಿ ತೂಕದ ಕಲ್ಲಿನಿಂದ ಮಾಡಲ್ಪಟ್ಟಿದೆ. ವಿಗ್ರಹವು ಐದು ವರ್ಷದ ಬಾಲಕ ರಾಮ ನಿಂತಿರುವ ಭಂಗಿಯಲ್ಲಿದೆ. ದೇಶದ ಇತರ ಇಬ್ಬರು ನುರಿತ ಕುಶಲಕರ್ಮಿಗಳಾದ ಬೆಂಗಳೂರಿನ ಗಣೇಶ್ ಭಟ್ ಮತ್ತು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರೊಂದಿಗೆ ಅರುಣ್ ಯೋಗಿರಾಜ್ ಅವರಿಗೆ ಶ್ರೀರಾಮನ ಮಗುವಿನ ರೂಪವನ್ನು ಬಿಂಬಿಸುವ […]
ರಾಮ ಮಂದಿರದಲ್ಲಿ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತ ಬಾಲರಾಮ: ಅರುಣ್ ಯೋಗಿರಾಜ್ ಹೆಗಲಿಗೆ ವಿಗ್ರಹ ನಿರ್ಮಾಣ ಕಾರ್ಯ
ಅಯೋಧ್ಯಾ: ರಾಮಮಂದಿರದ ನಿರ್ಮಾಣದ 60 ಪ್ರತಿಶತದಷ್ಟು ಪೂರ್ಣಗೊಂಡಿದ್ದು 2024 ರಲ್ಲಿ ಜನವರಿಯಲ್ಲಿ ರಾಮನು ದೇವಾಲಯದ ಮೂಲ ಗರ್ಭಗುಡಿಯನ್ನು ಸೇರಲಿದ್ದಾನೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಲಿರುವ ಬಿಲ್ಲು ಬಾಣದಿಂದ ಶಸ್ತ್ರಸಜ್ಜಿತವಾದ ಐದು ವರ್ಷದ ಬಾಲರಾಮನ ವಿಗ್ರಹವು ಗರ್ಭಗುಡಿಯಲ್ಲಿ ಸ್ಥಳವನ್ನು ಪಡೆಯಲಿದೆ ಎಂದು ಅಯೋಧ್ಯೆಯ ವರದಿಗಳು ತಿಳಿಸಿವೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆಯ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ನಿನ್ನೆ ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರುಣ್ […]