ಕಾಪು ಸಮುದ್ರತೀರದಲ್ಲಿ ‘ಆನಂದ ಲಹರಿ’: ರವಿಶಂಕರ್ ಗುರೂಜಿ ಸತ್ಸಂಗದಲ್ಲಿ ಪುಳಕಗೊಂಡ ಭಕ್ತರು
ಕಾಪು: ಆರ್ಟ್ ಆಫ್ ಲಿವಿಂಗ್ (Art Of Living) ಸಂಸ್ಥಾಪಕ ರವಿಶಂಕರ್ ಗುರೂಜಿ (Ravishanakar Guruji) ಮಂಗಳವಾರದಂದು ಇಲ್ಲಿನ ಸಮುದ್ರ ತೀರದಲ್ಲಿ ‘ಆನಂದ ಲಹರಿ’ ಮಹಾಸತ್ಸಂಗ ಕಾರ್ಯಕ್ರಮ ನಡೆಸಿಕೊಟ್ಟರು. ರವಿಶಂಕರ್ ಗುರೂಜಿ ಅವರು ವೇದಿಕೆ ಮೇಲೆರುತ್ತಿದ್ದಂತೆಯೇ ನೆರೆದವರು ಜಯ ಘೋಷ ಮೊಳಗಿಸಿದರು. ಪಾಲ್ಗೊಂಡ ಸಹಸ್ರಾರು ಜನರಿಗೆ ಬೆಲ್ಲದ ಶೀರ, ಅವಲಕ್ಕಿ- ಕಡಲೆಯುಕ್ತ ವಿಶೇಷ ಪ್ರಸಾದ ವಿತರಿಸಲಾಯಿತು. ಜನಸಾಗರದ ನಡುವೆ ವೇದಿಕೆಯಲ್ಲಿ ಸಂಚರಿಸಿದ ರವಿಶಂಕರ್ ಗುರೂಜಿ ಅವರು ಜನರ ಭಕ್ತಿ ಭಾವದ ಗೌರವ ಪಡೆದುಕೊಂಡು ಹಾರೈಸಿ, ಪುಷ್ಪದಳ ಪ್ರಸಾದವಾಗಿ […]
ಪುತ್ತಿಗೆ ಶ್ರೀಗಳ ಧರ್ಮ ಪ್ರಚಾರ ಕಾರ್ಯ ಅಭಿನಂದನೀಯ: ಶ್ರೀ ರವಿಶಂಕರ ಗುರೂಜಿ
ಉಡುಪಿ: ದೇಶ ವಿದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಾ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಪುತ್ತಿಗೆ ಶ್ರೀಪಾದರ ಕಾರ್ಯಯೋಜನೆ ಅಭಿನಂದನೀಯವಾಗಿದೆ ಎಂದು ಅಂತಾರಾಷ್ಟ್ರೀಯ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ಪೂಜ್ಯ ಶ್ರೀ ರವಿಶಂಕರ ಗುರೂಜಿ ಹೇಳಿದರು. ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಆಮಂತ್ರಣವನ್ನು ಪರಿಗಣಿಸಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಅವರು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾರನ್ನು ಭೇಟಿಯಾಗಿ ಶ್ರೀಕೃಷ್ಣನ ದರ್ಶನ ಮಾಡಿ ಮಾತನಾಡಿದರು. ಆಹಾರ, ನಿಯಮ, ಅನುಷ್ಠಾನಗಳ ಆಚರಣೆಗಳಿಂದ ಯತಿಧರ್ಮದ ಕಠಿಣ ಆಚರಣೆಯನ್ನು ನಡೆಸುತ್ತಾ ಶ್ರೀಕೃಷ್ಣ […]