ಮಂಗಳೂರು: ನ.26 ರಂದು ಅರೆಹೊಳೆ ಪ್ರತಿಷ್ಠಾನದ ವತಿಯಿಂದ ‘ಸುಖೀಭವ’ ಮಹಿಳಾ ಆರೋಗ್ಯ ಮಾಹಿತಿ ಕಾರ್ಯಕ್ರಮ
ಮಂಗಳೂರು: ಅರೆಹೊಳೆ ಪ್ರತಿಷ್ಠಾನವು ಆಯೋಜಿಸುವ ಸರಣಿ ಮಾಸಿಕ ಕಾರ್ಯಕ್ರಮ “ಬೆಳಕು” ಇದರ ಏಳನೇ ಕಾರ್ಯಕ್ರಮವು ನವೆಂಬರ್ 26 ರಂದು ಶನಿವಾರ ಬೊಂದೆಲ್ ನ ಮುಳಿಯಂಗಣದಲ್ಲಿ ಆಯೋಜಿಸಲಾಗಿದೆ. ಮಹಿಳೆಯರ ಆರೋಗ್ಯದ ಮಾಹಿತಿ ನೀಡುವ ‘ಸುಖೀಭವ’ ಎನ್ನುವ ಕಾರ್ಯಕ್ರಮಕ್ಕೆ ಹರ್ಷ ಡಯಾಗ್ನೋಸ್ಟಿಕ್ ಸರ್ವೀಸಸ್ ನ ನಿರ್ದೇಶಕಿ ಡಾ.ಪ್ರಿಯದರ್ಶಿನಿ ರೈ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿಯನ್ನ ನೀಡಲಿದ್ದು ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: […]
ಅರೆಹೊಳೆ ಪ್ರತಿಷ್ಠಾನದಿಂದ ನಂದಗೋಕುಲ ದೀಪಾವಳಿ ಸಂಭ್ರಮ
ಮಂಗಳೂರು: ಎಲ್ಲರೂ ಒಂದಾಗಿ ಸಂಭ್ರಮಿಸುವ ಹಬ್ಬಗಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತವೆ ಎಂದು ಫ್ಲೋರಿಡಾ ತುಳು ಎಸೋಸಿಯೇಷನ್ ಸಂಸ್ಥಾಪಕಿ ಶ್ರೀವಲ್ಲಿ ರೈ ಮಾರ್ಟಲ್ ಹೇಳಿದರು. ಅವರು ಅರೆಹೊಳೆ ಪ್ರತಿಷ್ಠಾನ ಆಯೋಜಿಸಿದ್ದ ನಂದಗೋಕುಲ ದೀಪಾವಳಿ ಸಂಭ್ರಮದಲ್ಲಿಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿಅರೆಹೊಳೆ ಪ್ರತಿಷ್ಠಾನವು ಪ್ರತಿವರ್ಷ ಬಾಲಪ್ರತಿಭೆಗಳಿಗೆ ನೀಡುವ ನಂದಗೋಕುಲ ದೀಪಾವಳಿ ಪುರಸ್ಕಾರವನ್ನು ತುಮಕೂರಿನ ಬಾಲಪ್ರತಿಭೆ ಆರ್ಯ ಆರ್ ಭಟ್ ಇವರಿಗೆ ನೀಡಲಾಯಿತು. ಇನ್ನೂರ್ವ ಅತಿಥಿ ದಿನೇಶ್ ಹೊಳ್ಳ ಮಾತನಾಡಿ, ಮಕ್ಕಳನ್ನು ಪ್ರೊತ್ಸಾಹಿಸುವ ಅರೆಹೊಳೆ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಧರ್ಮದರ್ಶಿ ಡಾ. ಹರಿಕೃಷ್ಣ […]