ಅಡಿಕೆ ದರ ಕುಸಿತ: ಕಂಗಾಲಾಗಿರುವ ರೈತರು
ಬೆಂಗಳೂರು: ಅಡಿಕೆ ಬೆಳೆ ದರ ದಿನ ಕಳೆದಂತೆ ಕುಸಿಯುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಬರೋಬ್ಬರಿ 2300 ರೂಪಾಯಿ ಪ್ರತಿ ಕ್ವಿಂಟಲ್ ಗೆ ಕುಂಠಿತವಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಾರಿ ಬರಗಾಲ ತಲೆದೋರಿದೆ. ಒಂದೆಡೆ ನೀರಿಲ್ಲ. ಮತ್ತೊಂದೆಡೆ ತೋಟಗಳನ್ನು ಉಳಿಸಿಕೊಳ್ಳಲು ಅಡಿಕೆ ಬೆಳೆಗಾರರು ಪರದಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಂತೂ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಈ ನಡುವೆ ಅಡಿಕೆ ಧಾರಣೆ ಕುಸಿತಗೊಳ್ಳಲು ಅಕ್ರಮವಾಗಿ ಅಡಿಕೆ ಆಮದು […]
ಬೈಂದೂರು: ಅಡಕೆ ಕಳ್ಳರ ಬಂಧನ; 2 ಲಕ್ಷ ಮೌಲ್ಯದ ಅಡಕೆ ವಶ
ಬೈಂದೂರು: ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಬೈಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೈಂದೂರು ಠಾಣಾ ವ್ಯಾಪ್ತಿಯ ನಾವುಂದ ಗ್ರಾಮದ ಕೋಡಿಯಾಡಿ ಫಾರ್ಮ್ ಹೌಸ್ ಅಂಗಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದ ಆರೋಪಿಗಳನ್ನು ಬೈಂದೂರು ಪಿಎಸ್ಐ ಮತ್ತು ತಂಡ ಬಂಧಿಸಿದ್ದು, ಆರೋಪಿಗಳಿಂದ 2,00,000/-ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.