ಚೈನ್ನೈ ಬಳಿ 12000 ವರ್ಷ ಪುರಾತನ ಕಲ್ಲಿನ ಕಲಾಕೃತಿಗಳನ್ನು ಪತ್ತೆಮಾಡಿದ ಭಾರತೀಯ ಪುರಾತತ್ವ ಇಲಾಖೆ
ಚೆನ್ನೈ: ಚೆನ್ನೈನ ಹೊರವಲಯದಲ್ಲಿರುವ ಓರಗಡಂನಲ್ಲಿ ಕಲ್ಲಿನ ಉಪಕರಣಗಳನ್ನು ತಯಾರಿಸಲಾಗುತ್ತಿದ್ದ ಪ್ರಾಚೀನ ಸ್ಥಳವನ್ನು ಭಾರತೀಯ ಪುರಾತತ್ವ ಇಲಾಖೆಯು ಉತ್ಖನನ ಮಾಡಿದೆ. ಈ ಪ್ರದೇಶದಲ್ಲಿ ದೊರೆತ ಕಲಾಕೃತಿಗಳು 12000 ವರ್ಷ ಪುರಾತನವಾಗಿದ್ದಿರಬೇಕೆಂದು ಪುರಾತತ್ವ ಇಲಾಖೆಯು ಅನುಮಾನ ವ್ಯಕ್ತಪಡಿಸಿವೆ. ಇಲ್ಲಿ ಅಗೆತ ಮಾಡಿದ ಒಂದೇ ಸ್ಥಳದಲ್ಲಿ ಸಾವಿರಾರು ವರ್ಷಗಳಿಂದ ಕನಿಷ್ಠ ನಾಲ್ಕು ಪ್ರತ್ಯೇಕ ನಾಗರಿಕತೆಗಳು ವಾಸವಾಗಿರುವ ಪುರಾವೆ ದೊರೆತಿದೆ. ವಡಕ್ಕುಪಟ್ಟು ಗ್ರಾಮದಲ್ಲಿ ನಡೆಸಿದ ಉತ್ಖನನದಲ್ಲಿ ಮೆಸೊಲಿಥಿಕ್ ಅವಧಿಯ ಕೈಗೊಡಲಿಗಳು, ಉಜ್ಜುಗಗಳು, ಸೀಳುವ ಮತ್ತು ಕತ್ತರಿಸುವ ಉಪಕರಣಗಳು ದೊರೆತಿವೆ. ಇವುಗಳೆಲ್ಲವೂ ಭೂಮಿಯ ಮೇಲ್ಮೈಯಿಂದ […]
ಆಗಸ್ಟ್ 5 ರಿಂದ 15 ರವರೆಗೆ ದೇಶದ ಸಂರಕ್ಷಿತ ಸ್ಮಾರಕ ಹಾಗೂ ತಾಣಗಳಿಗೆ ಉಚಿತ ಪ್ರವೇಶ
ನವದೆಹಲಿ: ಆಗಸ್ಟ್ 5 ರಿಂದ 15 ರವರೆಗೆ ದೇಶಾದ್ಯಂತ ತನ್ನ ಎಲ್ಲಾ ಸಂರಕ್ಷಿತ ಸ್ಮಾರಕಗಳು ಮತ್ತು ತಾಣಗಳಿಗೆ ಸಂದರ್ಶಕರು ಮತ್ತು ಪ್ರವಾಸಿಗರಿಗೆ ಸರ್ಕಾರವು ಉಚಿತ ಪ್ರವೇಶವನ್ನು ನೀಡಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ವರ್ಷದ ಆಗಸ್ಟ್ 5 ರಿಂದ 15 ರವರೆಗೆ ಎಲ್ಲಾ ಟಿಕೆಟ್ ಹೊಂದಿರುವ ಕೇಂದ್ರ ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ […]