ಯುಕೆಯ ಕೆಂಟ್‌ನಲ್ಲಿ 3ಲಕ್ಷ ವರ್ಷಗಳಷ್ಟು ಹಳೆಯದಾದ ಬೃಹತ್ ಕೈ ಕೊಡಲಿಗಳನ್ನು ಪತ್ತೆ ಮಾಡಿದ ಪುರಾತತ್ತ್ವ ಶಾಸ್ತ್ರಜ್ಞರು!!

ಕೆಂಟ್: ಯುಕೆಯ ಕೆಂಟ್‌ನಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಗಮನಾರ್ಹವಾದ ಆವಿಷ್ಕಾರವನ್ನು ಮಾಡಿದ್ದಾರೆ. ಮಾನವನ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಾಗೈತಿಹಾಸಿಕ ಕೈ ಕೊಡಲಿಗಳನ್ನು ಪತ್ತೆ ಮಾಡಲಾಗಿದ್ದು, ಇವುಗಳ ಗಾತ್ರ ಪುರಾತತ್ವ ಶಾಸ್ತ್ರಜ್ಞರನ್ನು ಬೆಚ್ಚಿ ಬೀಳಿಸಿವೆ. ಯುಸಿಎಲ್ ಆರ್ಕಿಯಾಲಜಿ ಸೌತ್-ಈಸ್ಟ್‌ನ ಸಂಶೋಧಕರು ನಡೆಸಿದ ಉತ್ಖನದಲ್ಲಿ 800 ಕ್ಕೂ ಹೆಚ್ಚು ಕಲ್ಲಿನ ಉಪಕರಣಗಳು ದೊರೆತಿವೆ. ಈ ಕಲಾಕೃತಿಗಳು 300,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಬ್ರಿಟನ್ ನ ಮೆಡ್ವೇ ಕಣಿವೆಯ ಮೇಲಿರುವ ಬೆಟ್ಟದ ಮೇಲೆ ಹಿಮಯುಗದ ಕೆಸರುಗಳಲ್ಲಿ ಸುರಕ್ಷಿತವಾಗಿ ಹುದುಗಿದ್ದ ಈ ಕಲ್ಲಿನ ಉಪಕರಣಗಳು […]