ಹಿರಿಕಿರಿಯರೆನ್ನದೆ ಎಲ್ಲರ ಮನಸೂರೆಗೊಳ್ಳುತ್ತಿದೆ “ಅಂತರ್ಜಲ ಮೀನು ಸುರಂಗ” ಪ್ರದರ್ಶನ: ಇದೇ ಮೊದಲ ಬಾರಿಗೆ “ಉಡುಪಿ ಉತ್ಸವ”ದಲ್ಲಿ ಮೀನುಗಳ ಲೋಕ ಅನಾವರಣ!!
ಉಡುಪಿ: ನ್ಯಾಶನಲ್ ಕನ್ಸ್ಯೂಮರ್ ಫೇರ್ (ಎನ್ ಸಿಎಫ್) ಉಡುಪಿ ವತಿಯಿಂದ ಕರಾವಳಿ ಬೈಪಾಸ್ ಬಳಿಯ ರಾ.ಹೆ. 66ರ ಸನಿಹದ ಶಾರದಾ ಇಂಟರ್ ನ್ಯಾಶನಲ್ ಹೋಟೆಲ್ ಸಮೀಪದ 10 ಎಕರೆ ಜಾಗದಲ್ಲಿ ಆರಂಭಗೊಂಡ ಬೃಹತ್ ವಸ್ತು ಪ್ರದರ್ಶನ, ಮನೋರಂಜನೆ ಮತ್ತು ಸಾಂಸ್ಕೃತಿಕ ಮೇಳವನ್ನು ಒಳಗೊಂಡ “ಉಡುಪಿ ಉತ್ಸವ”ದಲ್ಲಿ ನೀರೊಳಗಿನ “ಮೀನು ಸುರಂಗ ಪ್ರದರ್ಶನ” ಜನಾಕರ್ಷಣೆಯ ಕೇಂದ್ರವಾಗಿದ್ದು, ನಿತ್ಯವೂ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ. ಇಲ್ಲಿ ಎಲ್ಲರಿಗೂ ಆಟವಾಡಲು ಇಟಾಲಿಯನ್ ಟೊರಾಟೊರಾ, ಡ್ರ್ಯಾಗನ್ ಕಾರ್, ತ್ರಿಡಿ ಸಿನಿಮಾ, ಜಾಯಿಂಟ್ ವ್ಹೀಲ್, ಡ್ರ್ಯಾಗನ್ […]